ಸಿಕ್ಯಾಬ್ ಶಿಕ್ಷಣ ಸಂಸ್ಥೆಗೆ ನಾಲ್ಕು ಡಾಕ್ಟರೇಟ್, ಎರಡು ಸ್ವರ್ಣ ಪದಕಗಳ ಗರಿ
Four doctorates, two gold medals awarded to CICAB Educational Institute
ವಿಜಯಪುರ 28: ಇತ್ತಿಚೆಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ 17ನೇ ಘಟಿಕೋತ್ಸವದಲ್ಲಿ ಸಿಕ್ಯಾಬ್ ಶಿಕ್ಷಣ ಸಂಸ್ಥೆ ಗಮನಾರ್ಹ ಸಾಧನೆ ಮಾಡಿದ್ದು, ನಾಲ್ಕು ಡಾಕ್ಟರೇಟ್ ಪದವಿಗಳು ಹಾಗೂ ಎರಡು ಸ್ವರ್ಣ ಪದಕಗಳನ್ನು ಪಡೆದು ಕೀರ್ತಿ ಹೆಚ್ಚಿಸಿದೆ. 2025ನೇ ಸಾಲಿನ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಉನ್ನತ ಸಾಧನೆ ತೋರಿದ್ದು, ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಬಿಬಿ ಝೆಹರಾ ಮೊಹಮ್ಮದ್ ಇಸ್ಮಾಯಿಲ್ ಶೇಖ್ (ಬಿ ಎಸ್ಸಿಹಿ ಗೃಹ ವಿಜ್ಞಾನ) ದಲ್ಲಿ ಚಿನ್ನದ ಪದಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಅದೇ ರೀತಿ ಮಿಸ್ಬಾ ಅಬ್ದುಲ್ ಸಾಬ್ ಮುಲ್ಲಾ (ಬಿ ಎಹಿ ಐಚ್ಛಿಕ ಉರ್ದು) ಚಿನ್ನದ ಪದಕ ಪಡೆದಿದ್ದಾರೆ.
ಸಂಸ್ಥೆಯ ಅಧ್ಯಾಪಕಿಯರೂ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದು, ಎಸ್ಇಸಿಎಬಿ ಸಿಕ್ಯಾಬ್ ಎಆರ್ಎಸ್ ಇನಾಮದಾರ ಮಹಿಳಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಅಜ್ಮಾ ಇನಾಮದಾರ ಅವರು "ಎ ಸ್ಟಡಿ ಆನ್ ಫಿಜಿಕೋ-ಕೆಮಿಕಲ್ ಪ್ರಾಪರ್ಟಿಸ್, ನ್ಯೂಟ್ರಿಯಂಟ್ ಅನಲೈಸಿಸ್, ಎಂಟಿ ಆಕ್ಸಿಡೆಂಟ್ ಎಪಿಕಸಿ ಆ್ಯಂಡ್ ಪ್ರೊಡೆಕ್ಟ ಡೆವಲಪ್ ಮೆಂಟ್ ಆಫ್ ಮ್ಯಾಂಗೋ ಸೀಡ ಕರ್ನಲ್ ವರೈಟೀಸ್ ( ಪಾವಡರ್ ಆ್ಯಂಡ್ ಆಯಿಲ್) ಆಫ್ ಕರ್ನಾಟಕ" ಕುರಿತು ಸಂಶೋಧನೆ ಮಂಡಿಸಿ ಪಿಎಚ್.ಡಿ ಪದವಿ ಪಡೆದರು.
ಇನ್ನು ಇಂಜಿನಿಯರಿಂಗ್ ಕಾಲೇಜಿನ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥೆ ಡಾ. ನಿಶಾ ಎಸ್. ಅಮಿನ್ ಅವರು "ವಿಡಿಯೋ ಡಿಹೆಝಿಂಗ್ ಯೂಸಿಂಗ್ ಮಷಿನ್ ಲರ್ನಿಂಗ್ ಟೆಕ್ನಿನಿಕ್ಸ್" ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದರು. ಡಾ. ಶೈಲಾ ದೊಡ್ಡಮನಿ ಅವರು "ಎ ಸ್ಟಡಿ ಆನ್ ವುಡ್ ಟೆಕ್ಸ್ಚರ್ ಇಮೇಜ್ ಅನಾಲಿಸಿಸ್ ಯೂಸಿಂಗ್ ಡಿಪ್ ಲರ್ನಿಂಗ್ ಟೆಕ್ನಿಕ್ಸ್" ಕುರಿತು ಸಂಶೋಧನೆ ಮಂಡಿಸಿದರೆ, ಡಾ. ರೇಖಾ ಬಿರಾದಾರ್ ಅವರು "ಇಮೇಜ್ ಕಂಪ್ರೆಷನ್ ಟೆಕ್ನಿಕ್ಸ್ ವಿತ್ ಅಪ್ಲಿಕೇಶನ್ ಟು 3ಡಿ ಮೆಡಿಕಲ್ ಇಮೇಜಸ್" ಕುರಿತು ಸಂಶೋಧನೆ ಮಂಡಿಸಿ ಪಿಎಚ್.ಡಿ ಪದವಿ ಪಡೆದರು.
ಈ ಸಾಧಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಪಿಎಚ್.ಡಿ ಪದವಿ ಪ್ರದಾನ ಮಾಡಿದರು. ವಿದ್ಯಾರ್ಥಿಗಳ ಪರಿಶ್ರಮ, ಅಧ್ಯಾಪಕರ ಮಾರ್ಗದರ್ಶನ ಹಾಗೂ ಸಂಸ್ಥೆಯ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ಅಪೂರ್ವ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಸಲ್ಲಾವುದ್ದಿನ್ ಪುಣೇಕರ್, ನಿರ್ದೇಶಕರಾದ ಡಾ. ಜೀಯಾ ಪುಣೇಕರ್, ಕಾರ್ಯದರ್ಶಿಗಳಾದ ಎ ಎಸ್ ಪಾಟೀಲ್, ಸಿಕ್ಯಾಬ್ ಎ ಆರ್ ಎಸ್ ಐ ಕಾಲೇಜಿನ ಪ್ರಾಚಾರ್ಯರಾದ ಡಾ. ಎಚ್ಚ ಕೆ ಯಡಹಳ್ಳಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಸೈಯದ್ ಅಬ್ಬಾಸ್ ಅಲಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಇಂತಹ ಸಾಧನೆಗಳ ಮೂಲಕ ಸಂಸ್ಥೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 