ಗುರು ಪೂರ್ಣಿಮಾ ಪ್ರಯುಕ್ತ ಸುಕ್ಷೇತ್ರ ವೆಂಕಟಾಪುರಕ್ಕೆ ಪಾದಯಾತ್ರೆ
Hike to Sukshetra Venkatapuram on Guru Poornima
ಗದಗ 8 : ಇದೇ ದಿ. 10 ರಂದು ಗುರುಪೂರ್ಣಿಮಾ ಪ್ರಯುಕ್ತ ಸುಕ್ಷೇತ್ರ ವೆಂಕಟಾಪೂರದ ಉದ್ಭವ ಮೂರ್ತಿ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಪ್ರತಿವರ್ಷದಂತೆ ಈ ವರ್ಷವೂ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪಾದಯಾತ್ರೆಯು ಇದೇ ದಿ. 10 ರಂದು ಗುರುವಾರ ಗುರು ಪೂರ್ಣಿಮಾ ದಿನದಂದು ಬೆಳಿಗ್ಗೆ 6 ಗಂಟೆಗೆ ಶ್ರೀ ವೀರನಾರಾಯಣ ದೇವಸ್ಥಾನದಿಂದ ಸುಕ್ಷೇತ್ರ ವೆಂಕಟಾಪೂರ ಕ್ಷೇತ್ರಕ್ಕೆ ಸುಮಾರು 500ಕ್ಕೂ ಹೆಚ್ಚು ಭಕ್ತವೃಂದದವರಿಂದ ಒಳಗೊಂಡ ತಂಡವು ಗದಗ ಜಿಲ್ಲೆಯ ಉದ್ಭವ ಮೂರ್ತಿ ಎಂದೇ ಪ್ರಸಿದ್ಧವಾದ ದೇವಸ್ಥಾನ ತಿರುಪತಿ ತಿಮ್ಮಪ್ಪನ ಇನ್ನೊಂದು ಅವತಾರ ಶ್ರೀ ದೇವರ ವೆಂಕಟಪುರ ವೆಂಕಟೇಶ್ವರ ದೇವಸ್ಥಾನಕ್ಕೆ ಸತತ ಮೂರನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ
ಈ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕೆಂದು ಪಾದಯಾತ್ರೆ ಸಮಿತಿಯ ಪ್ರಮುಖರಾದ ಬಾಬು ಬಾಕಳೆ ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿರುತ್ತಾರೆ.
ಪಾದಯಾತ್ರೆಗೆ ಹೊರಡುವುದು ಮುಖ್ಯ ಕಾರಣ ಸಮಸ್ತ ನಮ್ಮರಾಷ್ಟ್ರ ಹಾಗೂ ರಾಜ್ಯದ ಜನತೆಗೆ ಆಯುಶ್ ಆರೋಗ್ಯ ಹಾಗೂ ರಾಜ್ಯದಲ್ಲಿ ಸಮೃದ್ಧಿ ಭರಿತ ಮಳೆ ಬೆಳೆಯಾಗಿ ರೈತರಿಗೆ ನಾಡಿನ ಜನತೆಗೆ ಒಳ್ಳೆದಾಗಲಿ ಹಾಗೂ ಸನಾತನ ಹಿಂದೂ ಧರ್ಮದ ಯುವ ಪೀಳಿಗೆ ಭಕ್ತಿ ಮಾರ್ಗವಾಗಿ ಪೂಜೆ ಪುನಸ್ಕಾರ ಭಯ ಭಕ್ತಿಯಿಂದ ನಡೆದುಕೊಳ್ಳುವಂತೆ ಅವರಲ್ಲಿ ಶಕ್ತಿ ತುಂಬುವಂತ ಕಾರ್ಯ ಮಾಡಬೇಕಾಗಿದೆ. ಧರ್ಮ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ ಆದಕಾರಣ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಮುಂದೆ ಬರುವಂತ ದಿನಮಾನಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಈ ಪಾದಯಾತ್ರೆ ಆಗಬಹುದು ಎಂದು ಹೇಳಿದರು.
ಪಾದಯಾತ್ರೆಗೆ ಬರುವಂತಹ ಭಕ್ತಾದಿಗಳಿಗೆ ಬಹಳಷ್ಟು ಭಕ್ತವೃಂದದವರಿಂದ ತಮ್ಮ ಸೇವೆಯನ್ನು ಹಮ್ಮಿಕೊಂಡಿದ್ದು ಅದರಲ್ಲಿ ನಾಗಾವಿಯಲ್ಲಿ ಟಿಫನ್ ವ್ಯವಸ್ಥೆ ಇರುತ್ತದೆ. ನಂತರ ವಿಮಲ್ ರೆಸಾರ್ಟ್ ಅಲ್ಲಿಯೂ ಕೂಡ ಟಿಫನ್ ವ್ಯವಸ್ಥೆ ಜ್ಯೂಸ್ ವ್ಯವಸ್ಥೆ ಇರುತ್ತದೆ ವೆಂಕಟೇಶ್ವರ ದೇವರ ದರ್ಶನ ಆದ ನಂತರ ವೆಂಕಟೇಶ್ವರ ದೇವಸ್ಥಾನದಲ್ಲಿ ಸುಮಾರು 1500 ಭಕ್ತರಿಗೆ ಊಟದ ವ್ಯವಸ್ಥೆ ಹಮ್ಮಿಕೊಂಡಿರುತ್ತಾರೆ ಸೇವೆ ಮಾಡಿದಂತ ಎಲ್ಲ ಭಕ್ತಾದಿಗಳಿಗೆ ಪಾದಯಾತ್ರೆಗೆ ಬರುವಂತ ಭಕ್ತಾದಿಗಳಿಗೆ ವೆಂಕಟೇಶ್ವರ ದೇವರ ಸುಖ ಶಾಂತಿ ನೆಮ್ಮದಿ ಆಯುಶ್ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪಾದಯಾತ್ರೆ ಸಮಿತಿ ವತಿಯಿಂದ ಪ್ರಾರ್ಥಿಸಲಾಗುವುದು ಎಂದು ಬಾಬು ಬಾಕಳೆ ಹಾಗೂ ಪಾದಯಾತ್ರೆ ಸಮಿತಿಯ ಸರ್ವ ಪ್ರಮುಖರು ತಿಳಿಸಿರುತ್ತಾರೆ.
ನಾಡಿನ ಸಕಲ ಭಕ್ತವೃಂದದವರ ಕ್ಷೇಮಾಭಿವೃದ್ಧಿಯಿಂದ ಹಮ್ಮಿಕೊಂಡ ಪಾದಯಾತ್ರೆ:- ಬಾಬು ಬಾಕಳೆ ಪಾದಯಾತ್ರೆ ಹೊರಡುವ ಪ್ರಾಮುಖ್ಯತೆ ಏನೆಂದರೆ ಸಮಸ್ತ ನಮ್ಮರಾಷ್ಟ್ರ ಹಾಗೂ ರಾಜ್ಯದ ಜನತೆಗೆ ಆಯುಶ್ ಆರೋಗ್ಯ ಹಾಗೂ ರಾಜ್ಯದಲ್ಲಿ ಸಮೃದ್ಧಿ ಭರಿತ ಮಳೆ ಬೆಳೆಯಾಗಿ ರೈತರಿಗೆ ನಾಡಿನ ಜನತೆಗೆ ಒಳ್ಳೆದಾಗಲಿ ಹಾಗೂ ಸನಾತನ ಹಿಂದೂ ಧರ್ಮದ ಯುವ ಪೀಳಿಗೆ ಭಕ್ತಿ ಮಾರ್ಗವಾಗಿ ಪೂಜೆ ಪುನಸ್ಕಾರ ಭಯ ಭಕ್ತಿಯಿಂದ ನಡೆದುಕೊಳ್ಳುವಂತೆ ಅವರಲ್ಲಿ ಶಕ್ತಿ ತುಂಬುವಂತ ಕಾರ್ಯ ಮಾಡಬೇಕಾಗಿದೆ. ಧರ್ಮ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ ಆದಕಾರಣ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಬಾಬು ಬಾಕಳೆ.
ಸಾಮಾಜಿಕ ಹೋರಾಟಗಾರರು, ಗದಗ.
ಫೋ :- 77955 35935.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 