ಬಮ್ಮನಜೋಗಿ ತಾಂಡಕ್ಕೆ ಪ್ರೌಢಶಾಲೆ ಮಂಜೂರು: ಶಾಸಕರಿಗೆ ಗ್ರಾಮಸ್ಥರಿಂದ ಸನ್ಮಾನ
High school sanctioned for Bammanjogi Tanda: MLA felicitated by villagers
ದೇವರಹಿಪ್ಪರಗಿ 20: ತಾಲೂಕಿನ ಬಮ್ಮನಜೋಗಿ ತಾಂಡಾ ಗ್ರಾಮದ ಬಹುದಿನಗಳ ಬೇಡಿಕೆಯಾದ ಪ್ರೌಢಶಾಲೆಯನ್ನು ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ಮಂಜೂರು ಮಾಡಿಸಿದ್ದಕ್ಕೆ ಗ್ರಾಮಸ್ಥರಿಂದ ಶಾಸಕರಿಗೆ ಸನ್ಮಾನಿಸಿ, ಗೌರವಿಸಿದರು.
ಇತ್ತೀಚೆಗೆ ಶಾಸಕರ ಸ್ವಗೃಹದಲ್ಲಿ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಶಾಲಾ ಶಿಕ್ಷಕರು ಭೇಟಿ ಮಾಡಿ ಗ್ರಾಮದ ಬಡ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ಪ್ರೌಢಶಾಲೆ ಇಲ್ಲದ ಕಾರಣ ಉನ್ನತ ಅಭ್ಯಾಸಕ್ಕಾಗಿ ಬೇರೆ ಗ್ರಾಮಗಳಿಗೆ ಹೋಗಬೇಕಾದ ಕಾರಣ ಅರ್ಧದಲ್ಲಿ ಶಾಲೆ ಬಿಟ್ಟು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಬಹು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಪ್ರೌಢಶಾಲೆ ಮಂಜೂರು ಆಗದ ಕಾರಣ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಅದರಂತೆ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡಿಸಿದ್ದಕ್ಕಾಗಿ ಮುಖ್ಯ ಗುರುಗಳಾದ ಬಿ.ಡಿ. ಪಾಟೀಲರ ನೇತೃತ್ವದಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿಸಿ ಮಾತನಾಡಿದ ಮುಖ್ಯಗುರುಗಳು ಈ ಭಾಗದ ಮಕ್ಕಳಿಗೆ ಕಲಿಯಲು ಶಾಸಕರು ಪ್ರೌಢಶಾಲೆ ಮಂಜೂರು ಮಾಡಿರುತ್ತಾರೆ. ಇದರಿಂದ ಸುತ್ತ ಮುತ್ತಲಿನ ಗ್ರಾಮಗಳಾದ ರಾಮನವಸ್ತಿ ಶಾಲೆ, ಇಬ್ರಾಹಿಂಪುರ ತಾಂಡಾ ಶಾಲೆ, ಬಮ್ಮನ ಜೋಗಿ ತಾಂಡಾ-1 ಹಾಗೂ 2 ಮತ್ತು ಬಮ್ಮನಜೋಗಿ ಗ್ರಾಮದ ಮಕ್ಕಳಿಗೆ ಪ್ರೌಢಶಾಲೆ ಮಂಜೂರು ಆದಕಾರಣ ಅನುಕೂಲವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ನಾಗೇಶ ನಾಗೂರ, ಎನ್.ಎಸ್.ಹರವಾಳ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಶೋಕ ನಾಯಕ, ಭೂ ದಾನಿಗಾದ ದೇಸು ನಾಯಕ,ಮಾಜಿ ತಾಪಂ ಸದಸ್ಯ ದೀಲೀಪ್ ರಾಠೋಡ, ಗ್ರಾಪಂ ಸದಸ್ಯರಾದ ಕಾಮಸಿಂಗ ಚವ್ಹಾಣ, ಶಾಂತು ರಾಠೋಡ, ಬಾಬು ರಾಠೋಡ, ಭೀಮ ನಾಯಕ, ರಾಮು ನಾಯಕ, ವಿ.ಕೆ.ರಾಠೋಡ, ನೀಲು ಪವಾರ,ಹೆಗ್ಗು ನಾಯಕ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 