ಗದಗ 23ನೇ ವಾರ್ಡಿನಲ್ಲಿ ಹೈಟೆಕ್ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Hi-tech drainage and road development work launched in Gadag 23rd Ward
ಗದಗ 23ನೇ ವಾರ್ಡಿನಲ್ಲಿ ಹೈಟೆಕ್ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಗದಗ 08: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡನಲ್ಲಿನ ಒಕ್ಕಲಗೇರಿ ಓಣಿಯ ಭರಮಪ್ಪ ದೇವಸ್ಥಾನದ ಹತ್ತಿರ ಕಳಸಣ್ಣವರ ಬಡಾವಣೆ, ಪರಶುರಾಮ್ ಕಂಬಳಿ ಮನೆ, ನಾಗಪ್ಪ ಗುಗ್ಗರಿಯವರ ಮನೆ ಹಾಗೂ ಖಾದರ್ ಕಿರೆಸೂರ್ ರವರ ಮನೆಯ ಹತ್ತಿರದಲ್ಲಿನ ಬಡಾವಣೆಯ ನಾಗರಿಕರ ಬಹುದಿನಗಳ ಬೇಡಿಕೆಯಾದ ಓಣಿಯಲ್ಲಿನ ರಸ್ತೆಯಲ್ಲಾ ತಗ್ಗು ಗುಂಡಿಗಳಿಂದ ಹಾಳಾಗಿದ್ದು ಅದನ್ನು ದುರಸ್ಥಿಗೊಳಿಸಿ ಸುಸಜ್ಜಿತ ರಸ್ತೆ ಚರಂಡಿ ನಿರ್ಮಾಣ ಮಾಡುವ ಕುರಿತು ಹಲವಾರು ಸಲ ಗದಗ ಬೆಟಗೇರಿ ನಗರಸಭೆಯ ಚುನಾಯಿತ ಸದಸ್ಯರಿಗೆ ಆಗ್ರಹಿಸಲಾಗಿತ್ತು.
ಬಹುಜನರ ಜನಾಗ್ರಹದ ದ್ಯೋತಕವಾಗಿಇದೇ ಆ. 07ರಂದು ಬೆಳಿಗ್ಗೆ 11 ಘಂಟೆಗೆ ನಗರಸಭೆಯ 23 ನೇ ವಾರ್ಡಿನ ಸದಸ್ಯರು ಹಾಗೂ ನಗರಸಭೆಯ ವಿರೋಧ ಪಕ್ಷದ ಉಪ ನಾಯಕರಾದ ಜನಾಬ ಬರಕತ ಅಲಿ ಮುಲ್ಲಾ ರವರ ನೇತ್ರತ್ವದಲ್ಲಿ ಬಡಾವಣೆಯ ಮುಖಂಡರಾದ ಬಸಪ್ಪ ಫಕ್ಕಿರ್ಪ ಗುಗ್ಗರಿ. ನಾಗಪ್ಪ ಗುಗ್ಗರಿ, ಕಾಂಗ್ರೇಸ್ ಮುಖಂಡರಾದ ಆಶೀಫ್ ಮುಲ್ಲಾ, ಜನಾಬ್ ಎಚ್ ಕೆ ಮುಲ್ಲಾ ಹಾಗೂ ನ್ಯಾಯವಾದಿಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಇವರ ಉಪಸ್ಥಿತಿಯಲ್ಲಿ ಮೂಲಭೂತ ಸೌಕರ್ಯಗಳ ಸಾಮಾನ್ಯ ನಿಧಿ ಅನುದಾನದ ಅಡಿಯಲ್ಲಿ ರಸ್ತೆಗಳಿಗೆ ಫೇವರ್ಸ ಅಳವಡಿಕೆ ಹಾಗೂ ಸುಸಜ್ಜಿತ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಬಡಾವಣೆಯ ಸರ್ವೋತೋಮುಖ ಅಭಿವೃದ್ಧಿಗಾಗಿ ವಾರ್ಡಿನ ಜನಸ್ನೇಹಿ ನಾಯಕರಾದ ಬರಕತ ಅಲಿ ಮುಲ್ಲಾರವರು ವಾರ್ಡಿನಲ್ಲಿ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಬಡಾವಣೆಯ ನಾಗರಿಕರ ಶ್ರೇಯೋಭಿವೃದ್ಧಿಗೆ ಕಾರಣಿಭೂತರಾಗಿರುತ್ತಾರೆ. ಈ ಒಂದು ಅಭೂತಪೂರ್ವ ಕಾರ್ಯಕ್ರಮಗಳನ್ನು ಕೈಗೊಂಡಿರುವದು ವಾರ್ಡಿನ ನಾಗರಿಕರಿಗೆ ಹೆಮ್ಮೆಯ ಸಂಗತಿಯಾಗಿರುತ್ತದೆ ಎಂದು ಬಡಾವಣೆಯ ನಾಗರಿಕರು ತಮ್ಮ ಜನಸ್ಪಂಧನೆಯನ್ನು ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಗಣೇಶ ಸತ್ಯಪ್ಪನವರ, ಸಿದ್ದಣ್ಣ ತುರಕಾಣಿ, ಶಫಿ ಕುನ್ನಿಬಾವಿ, ಜಗದೀಶ್ ಗೌಡರ, ಕೊಟ್ರೇಶ್ ಗುಜಮಾಗಡಿಮಠ, ಮಹಮ್ಮದ್ ಶಾಹಿದ್ ಮುಲ್ಲಾ, ಅಲ್ತಾಫ್ ಇಟಿ, ಮಹೇಶ್ ಸತ್ಯಪ್ಪನವರ, ಬಸವರಾಜ ಹತ್ತಿಶೆಟ್ಟರ, ಬಾಬು ಗುಳಗುಂದಿ, ಖಾದರ್ ಕಿರೆಸೂರ್,ಬಸಪ್ಪ ಕಂಬಳಿ, ರತ್ನವ್ವ ಬಳ್ಳಾರಿ, ವಿಜಯಲಕ್ಷ್ಮಿ ನಾಗಸಮುದ್ರ, ವಿಜಯಲಕ್ಷ್ಮಿಬೆಳ್ಳಿ, ಜ್ಯೋತಿ ಬಂಡಿವಾಡ, ಮಲ್ಲಮ್ಮ ಗುಡ್ಡಿಮಠ, ಅನ್ನಪೂರ್ಣ ಗೌಡರ, ಪ್ರೇಮಾ ಕನ್ಯಾಳ್, ಚಂಬವ್ವ ಗುಜಮಾಗಡಿ, ಚನ್ನಮ್ಮ ಗುಳಗಣ್ಣವರ, ಸರೋಜ ಸತ್ಯಪ್ಪನವರ, ಗಂಗಮ್ಮ ಗುಜಮಾಗಡಿ, ಹೇಮಾವತಿ ಸಂಗೊಳ್ಳಿ, ಶರಣಮ್ಮ ರಾಜೇಶ್ವರಿ ಗೌಡರ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 