ಕಾಡು ನಾಶದಿಂದ ಮಾನವ ಬದುಕು ಅಪಾಯಕ್ಕೆ ಹಿ ಪ್ರೊ. ಸೈಯದ್ ಅಹ್ಮದ್ ಎಚ್ಚರಿಕೆ

ಕಾಡು ನಾಶದಿಂದ ಮಾನವ ಬದುಕು ಅಪಾಯಕ್ಕೆ ಹಿ ಪ್ರೊ. ಸೈಯದ್ ಅಹ್ಮದ್ ಎಚ್ಚರಿಕೆ Hi Prof. Human life is at risk due to forest destruction. Syed Ahmed Warning

ಧಾರವಾಡ  15: ಅರಣ್ಯಗಳನ್ನು ಭೂಮಂಡಲದ ಶ್ವಾಸಕೋಶಗಳೆಂದು ಕರೆಯುತ್ತಾರೆ. ಅರಣ್ಯ ನಾಶದಿಂದ ಮಾನವನ ಬದುಕು ಖಂಡಿತ ವಿನಾಶವಾಗುತ್ತದೆ. ಅರಣ್ಯ ನಾಶ ನಮ್ಮ ನಾಗರಿಕತೆಯ ವಿನಾಶವೂ ಹೌದು ಎಂದು ಮೊರಬದ ಸರಕಾರಿ ಪ. ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಸೈಯದ್ ಫಯಾಜ್ ಅಹ್ಮದ್ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ತಾಲೂಕಿನ ಯಾದವಾಡ ಸರಕಾರಿ ಪ್ರೌಢ ಶಾಲೆಯಲ್ಲಿ ‘ವಿಶ್ವ ಪರಿಸರ ದಿನಾಚರಣೆ’ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅರಣ್ಯ ನಾಶ ನಾಗರಿಕತೆಯ ವಿನಾಶ’ ವಿಷಯ ಕುರಿತು ಉಪನ್ಯಾಸ ನೀಡಿ, ಮಾತನಾಡಿದರು. 

ಅಭಿವೃದ್ಧಿ ಹಾಗೂ ನಗರೀಕರಣದ ನೆಪದಲ್ಲಿ ಬೇಕಾಬಿಟ್ಟಿಯಾಗಿ ಅರಣ್ಯ ನಾಶ ಮಾಡುತ್ತಿರುವುದು ಸಲ್ಲದು. ಅರಣ್ಯಗಳು ನಮಗೆ ಅನೇಕ ರೀತಿಯಿಂದ ಮಹದುಪಕಾರವನ್ನು ಮಾಡಿವೆ. ದೇಶದ ಅಭಿವೃದ್ಧಿಯಲ್ಲಿ ಅರಣ್ಯಗಳ ಪಾತ್ರ ದೊಡ್ಡದು. ಪರಿಸರದ ಸಮತೋಲನೆಗೆ ಭೂಮಿಯ ಮೇಲೆ ಕನಿಷ್ಠ ಶೇ. 30 ರಷ್ಟಾದರು ಅರಣ್ಯವಿರಬೇಕು. ಆದರೆ ಇಂದು ಕರ್ನಾಟಕದಲ್ಲಿ ಶೇ. 20 ಮಾತ್ರ ಅರಣ್ಯವಿದೆ. ಕಾಡು ಎಲ್ಲಿದೆಯೋ ಅಲ್ಲಿ ನಮ್ಮ ಜೀವನವಿದೆ. ನಾಗರಿಕತೆ ಇದೆ. ಕಾಡಿದ್ದರೇ ನಾಡು ಎಂಬುದನ್ನು ನಾವು ಪ್ರಜ್ಞಾಪೂರ್ವಕವಾಗಿ ಅರಿಯಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.