ಹೆರಾಯಿನ್ ಮಾರಾಟ: ಐವರು ಆರೋಪಿಗಳ ಬಂಧನ 30,000 ರೂ.ಮೌಲ್ಯದ ವಸ್ತು ವಶ
Heroin sale: Five accused arrested, goods worth Rs. 30,000 seized
ಬೆಳಗಾವಿ 30: ಹೆರಾಯಿನ್ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಬಂದಿದ್ದಾಗ ಮಾರ್ಕೇಟ್ ಠಾಣೆ ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸದಾಶಿವ ನಗರ ಅಂಬೇಡ್ಕರ್‌ಗಲ್ಲಿ ನಿವಾಸಿ ರೆಹಾನ್ ಮಹ್ಮದಗೌಸ ರೋಟಿವಾಲೆ, ಮಹಾರಾಷ್ಟ್ರ ಪಂಢರಪೂರ ಓಜೇವಾಡಿ ನಿವಾಸಿ ಗಣೇಶಕುಮಾರ ಅನಿಲ ನಾಗನೆ, ಮೂಲ ಸೊಲ್ಲಾಪೂರ ಬಾರಸಿ ಹಾಲಿ ಬೆಳಗಾವಿ ಸುಭಾಷನಗರ ನಿವಾಸಿ ಸೈಯದ್‌ಜಾನೀಶ್ ಗುಲಾಬಹ್ಮದ ಅಂಗರಶಾ, ಸಾಂಗ್ಲಿ ನಿವಾಸಿ ಆದಿತ್ಯ ರಾಜು ಪಡಾಳಕರ ಮತ್ತು ಬೆಳಗಾವಿ ರುಕ್ಮಿಣಿ ನಗರ ನಿವಾಸಿ ಮೊಹ್ಮದಹುಸೇನ್ ಅ ಸೈಬಾಜ ನೂರಹ್ಮದ ಇನಾಮದಾರ ಬಂಧಿತ ಆರೋಪಿಗಳಾಗಿದ್ದಾರೆ.
ದಿ. 29ರಂದು ಬೆಳಗಾವಿ ಸುಭಾಷ ನಗರ ಪ್ರಿಯಾಂಕಾ ರೆಸಿಡೆನ್ಸಿ ಬಳಿ ಅಕ್ರಮವಾಗಿ ಹೆರಾಯಿನ್ ಮಾದಕ ವಸ್ತು ಮಾರಾಟದ ಸಿದ್ಧತೆಯಲ್ಲಿದ್ದಾಗ ಮಾರ್ಕೇಟ್ ಪೊಲೀಸ್ ಠಾಣೆಯ ಪಿಎಸ್‌ಯ ವಿಠಲ ಹಾವನ್ನವರ ಮತ್ತು ಸಿಬ್ಬಂದಿ ಅವರು ದಾಳಿ ನಡೆಸಿೈವರು ಆರೋಪಿಗಳನ್ನು ಬಂಧಿಸಿ ಅವರಿಂದ 30,000ರೂ. ಮೌಲ್ಯದ 30ಗ್ರಾಂ ಹೆರಾಯಿನ್ ಜಪ್ತ ಮಾಡಿಕೊಂಡು ಆರೋಪಿಗಳ ವಿರುದ್ಧ ಮಾರ್ಕೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 