ಕರ್ತವ್ಯದಲ್ಲಿದ್ದಾಗ ವೀರಯೋಧನ ಸಾವು
Heroic soldier dies while on duty
ಲೋಕದರ್ಶನ ವರದಿ
ಯಮಕನಮರಡಿ 16 : ಯಮಕನಮರಡಿ ಕ್ಷೇತ್ರದ ಜಿನರಾಳ ಗ್ರಾಮದ ಹೆಮ್ಮೇಯ ಪುತ್ರ ಭಾರತೀಯ ಸೇನೆಯ ಸೈನಿಕ ಪ್ರದಿಪ ಲಖಮಗೌಡ ಪಾಟೀಲ ಅವರು ಸೇವೆಯಲ್ಲಿದ್ದಾಗ ಸಂಭವಿಸಿದ ದುರದೃಷ್ಟಕರ ಅಪಘಾತದಲ್ಲಿ ವೀರಮರಣ ಹೊಂದಿದ್ದು ಇಂದು ಅವರ ಸ್ವ-ಗ್ರಾಮಕ್ಕೆ ಆಗಮಿಸಿದ ಅವರ ಪಾರ್ಥಿವ ಶರೀರಕ್ಕೆ ಗೌರವಗಳೋಂದಿಗೆ ಮಾಲಾರೆ್ಣ ಮಾಡಿ ಸರ್ಕಾರಿ ಗೌರವಗಳೊಂದಿಗೆ ಬಾವುಕ ವಿದಾಯ ದೊಂದಿಗೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಬದಲ್ಲಿ ಕರ್ನಾಟಕ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿ ಸಿ ಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೋಳಿ, ದಂಢಾಧಿಕಾರಿ ಬಲರಾಮ ಕಟ್ಟಿಮನಿ ಕಂದಾಯ ನಿರಿಕ್ಷಕರಾದ ಕಲಕಾಂಬಕರ, ಪೃಥ್ವಿ ಕತ್ತಿ, ಮಾರುತಿ ಅಷ್ಟಗಿ, ಬಸವರಾಜ ಹುಂದ್ರಿ ತಾಲೂಕಾ ಹಾಗೂ ರೇವ್ಯೂನ್ಯು ಇಲಾಖೆ ಅಧಿಕಾರಿಗಳು ಹಂಚಿನಾಳ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹುಣಸಿಕೊಳ್ಳಮಠದ ಪೂಜ್ಯರಾದ ಸಿದ್ದಬಸವ ದೇವರು ಸೇರಿದಂತೆ ಅಪಾರ ಗಣ್ಯಮಾಣ್ಯರು ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 