ಬೆಂಗಳೂರು, ನ 14 : ಒಬ್ಬರನ್ನೊಬ್ಬರು ಹೋಲು 7 ಜನ ಇರ್ತಾರೆ ಅನ್ನೋ ಮಾತಿದೆ ಗ್ಲೋಬಲ್ ಸಿನಿ ಕ್ರಿಯೇಷನ್ಸ್ಅಡಿಯಲ್ಲಿ ಮಧು ಗೌಡ್ರು ನಿರ್ಮಿಸಿರುವ ಛಾಯಾ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಈ ಚಿತ್ರದ ನಾಯಕನನ್ನು ನೋಡಿದಾಗ, ಈ ಮಾತು ನಿಜವೇನೋ ಎನಿಸುತ್ತದೆ
'ಛಾಯಾ' ಚಿತ್ರದ ನಾಯಕನಾಗಿ ಹೊಸ ಪ್ರತಿಭೆ ಆನಂದ್ ನಟಿಸಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಹೋಲುವ ಮುಖ, ಮೈಕಟ್ಟು, ಧ್ವನಿ ಅಲ್ಲದೆ ಸ್ವತಃ ಆನಂದ್ ಅವರು ಪುನೀತ್ ಅಭಿಮಾನಿಯೂ ಹೌದಂತೆ!
'ಅದೃಷ್ಟವೋ, ಪುಣ್ಯವೋ, ಒಂದು ಆಂಗಲ್ ನಿಂದ ಪುನೀತ್ ರಾಜ್ ಕುಮಾರ್ ಅವರ ಹಾಗೆ ಕಾಣುತ್ತೇನೆ ಎಂದು ಆತ್ಮೀಯರು ಹೇಳುತ್ತಾರೆ ಧ್ವನಿಯೂ ಹಾಗೆಯೇ ಇದೆ ಅವರಂತೆ ರೂಪವಿದ್ದರಷ್ಟೇ ಸಾಲದು ಅಭಿನಯವೂ ಬೇಕು ಅದಕ್ಕಾಗಿ ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತೇನೆ ಜೊತೆಗೆ 'ಛಾಯಾ' ಚಿತ್ರದ ಯಶಸ್ಸಿಗೆ ಬೇಕಾದ ಎಲ್ಲ ಪ್ರಯತ್ನಗಳಿಗೂ ಸಹಕರಿಸುತ್ತೇನೆ' ಎಂದು ಆನಂದ್ ಹೇಳಿದ್ದಾರೆ
ಸ್ಯಾಂಡಲ್ವುಡ್ನ 100ಕ್ಕೂ ಅಧಿಕ ಚಿತ್ರಗಳಿಗೆ ಕೊರಿಯಾಗ್ರಫಿ ಮಾಡಿರುವ ಜಗ್ಗು ಮಾಸ್ಟರ್ 'ಛಾಯಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಹಾರರ್ ಆಧಾರಿತ ಚಿತ್ರದಲ್ಲಿ ಸಂದೇಶವೂ ಇದೆ. ಸ್ನೇಹಕ್ಕೂ, ಬಧುತ್ತವಕ್ಕೂ ಇರುವ ವ್ಯತ್ಯಾಸ ಹೇಳಲಾಗಿದೆ ಅಲ್ಲದೆ ಅತ್ಯಾಚಾರದಂತಹ ಅಮಾನವೀಯ ಕೃತ್ಯಕ್ಕೆ ನೀಡಬೇಕಾದ ಶಿಕ್ಷೆಯ ಬಗ್ಗೆಯೂ ಸಂದೇಶ ನೀಡಲಾಗಿದೆ ಎಂದು ನಿರ್ದೇಶಕ ಜಗ್ಗು ತಿಳಿಸಿದ್ದಾರೆ.
ಚಿತ್ರದ ಆಡಿಯೋ ಹಕ್ಕನ್ನು ಸಿರಿ ಮ್ಯೂಸಿಕ್ ಪಡೆದುಕೊಂಡಿದೆ. ಆಡಿಯೋ ಬಿಡುಗಡೆಗೊಳಿಸಿರುವ ನ್ಯಾಯಾಧೀಶ ರಾಜಶೇಖರ್, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ತಾರಾಗಣದಲ್ಲಿ ಆನಂದ್, ತೇಜು ರಾಜ್, ಅನನ್ಯ ಮೊದಲಾದವರಿದ್ದಾರೆ.