ಹೇಮಂತ್ ಸೊರೆನ್ ಪ್ರಮಾಣ: ಸೋನಿಯಾ, ರಾಹುಲ್ ಗೆ ಆಹ್ವಾನ

ರಾಂಚಿ, ಡಿಸೆಂಬರ್ 26 ,ನಾಳಿದ್ದು ಭಾನುವಾರ ಜಾರ್ಖಂಡ್  ನೂತನ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್  ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮುಖಂಡ ರಾಹುಲ್ ಗಾಂಧಿಯವರನ್ನು ಆಹ್ವಾನಿಸಲಾಗಿದೆ.ಸರ್ಕಾರ ರಚನೆ ಸಂಬಂಧ ಸೊರೆನ್ ಹಿರಿಯ ಕಾಂಗ್ರೆಸ್ ಮುಖಂಡರ ಜತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ಹುದ್ದೆಗಳ ಜತೆಗೆ ಕಾಂಗ್ರೆಸ್ ಉಪಮುಖ್ಯಮಂತ್ರಿ ಹುದ್ದೆಗೂ ಬೇಡಿಕೆಯಿಡಲಿದೆ ಎಂದೂ   ಹೇಳಲಾಗುತ್ತಿದೆ. ರಾಜ್ಯಪಾಲರಾದ ದ್ರೌಪದಿ ಮುರುಮ್ ಅವರು ಸೊರೆನ್ ಅವರಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ ಎಂದು ಈಗಾಗಲೇ ಪಕ್ಷದ ಮೂಲಗಳು ಹೇಳಿವೆ.ಮಂಗಳವಾರ ಹೇಮಂತ್ ಅವರು ತಂದೆ ಶಿಬು ಸೊರೆನ್, ಆರ್ಜೆಡಿ ಕಾರ್ಯಾಧ್ಯಕ್ಷ ತೇಜಸ್ವಿ ಯಾದವ್ ಜತೆ  ರಾಜ್ಯಪಾಲರನ್ನು ಭೇಟಿ ಮಾಡಿ ಮೂವರು ಜೆವಿಎಂಪಿ ಸದಸ್ಯರೂ ಸೇರಿದಂತೆ ಒಟ್ಟು 50 ಶಾಸಕರ ಬೆಂಬಲಪತ್ರ ಸಲ್ಲಿಸಿದ್ದಾರೆ.