33 ವರ್ಷಗಳ ಸೇವೆ ಬಳಿಕ ಆರೋಗ್ಯ ಇಲಾಖೆಯ ಹೇಮನಗೌಡ ಪಾಟೀಲರಿಗೆ ಸನ್ಮಾನ

33 ವರ್ಷಗಳ ಸೇವೆ ಬಳಿಕ ಆರೋಗ್ಯ ಇಲಾಖೆಯ ಹೇಮನಗೌಡ ಪಾಟೀಲರಿಗೆ ಸನ್ಮಾನ  Hemanagowda Patil of the Health Department felicitated after 33 years of service

ಲೋಕದರ್ಶನ ವರದಿ 

ಗದಗ, ಆ. 3: ಆರೋಗ್ಯ ಇಲಾಖೆಯಲ್ಲಿ 33 ವರ್ಷಗಳ ಕಾಲ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಸಮರಾ​‍್ಣ ಮನೋಭಾವದಿಂದ ಸೇವೆ ಸಲ್ಲಿಸಿ ನಿವೃತ್ತರಾದ ಹೇಮನಗೌಡ ಪಾಟೀಲ ಅವರನ್ನು ಗದಗದಲ್ಲಿ ನಡೆದ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.  ಆರೋಗ್ಯ ನೀರೀಕ್ಷಣಾಧಿಕಾರಿಗಳ ಸಂಘದ ಗದಗ ಜಿಲ್ಲಾ ಘಟಕ ಹಾಗೂ ವೆರಿ ಗುಡ್ ಮಾರ್ನಿಂಗ್ ದಿನಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಹೇಮನಗೌಡ ಪಾಟೀಲ ಅವರ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು.  

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದಪ್ಪ ಲಿಂಗದಾಳ ಮಾತನಾಡಿ, "ಹೇಮನಗೌಡ ಪಾಟೀಲ ಅವರು ತಮ್ಮ ಸೇವಾವಧಿಯಲ್ಲಿ ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿ ಇಲಾಖೆಗೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ನಿವೃತ್ತಿ ಜೀವನ ಆರೋಗ್ಯ, ನೆಮ್ಮದಿ ಹಾಗೂ ಸಂತೋಷದಿಂದ ಕೂಡಿರಲಿ" ಎಂದು ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಹೇಮನಗೌಡ ಪಾಟೀಲ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ ವೆರಿ ಗುಡ್ ಮಾರ್ನಿಂಗ್ ದಿನಪತ್ರಿಕೆಯ ಸಂಪಾದಕ ದೇವಪ್ಪ ಲಿಂಗದಾಳ, ಆರೋಗ್ಯ ನೀರೀಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಸಿ. ಹಿರೇಹಾಳ, ಶಾಮುವೇಲ್ ಕರಡಿಗುಡ್ಡ, ಎಸ್‌.ಬಿ. ಗಡಾದ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಎಲ್ಲರೂ ಹೇಮನಗೌಡ ಪಾಟೀಲ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.