ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಅಸ್ಸಾಂ 30: ವಿಶ್ವ ಅಥ್ಲೆಟಿಕ್ಸ್ನ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕುರುಕುಳ ಆರೋಪ ಕೇಳಿಬಂದಿದೆ.
ನಿಪೋನ್ ದಾಸ್ ಹಿಮಾ ದಾಸ್ ಕೋಚ್ ಆಗಿದ್ದು, 20 ವರ್ಷದ ಯುವತಿಯೊಬ್ಬಳು ತನಗೆ ನಿಪೋನ್ ದಾಸ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೇ ತಿಂಗಳಲ್ಲಿ ತನಗೆ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬುದು ಯುವತಿಯ ಆರೋಪವಾಗಿದೆ.
"ಸಾರುಸ್ಜೈ ಸ್ಟೇಡಿಯಂನಲ್ಲಿ ಟ್ರೇನಿಂಗ್ ಸಮಯದಲ್ಲಿ ನಿಪೋನ್ ಕೋಚ್ ಮಾಡುತ್ತಿದ್ದ ವೇಳೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆ ಯುವತಿ ಬಸಿಷ್ಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. "ಸಹಕರಿಸದಿದ್ದರೆ, ಟ್ರೇನಿಂಗ್ ಸೆಷನ್ನಿಂದ ಅಮಾನತು ಮಾಡುವ ಬೆದರಿಕೆ ಒಡ್ಡಿದ್ದರು ಎಂದೂ ಆ ಯುವತಿ ಹೇಳಿಕೆ ನೀಡಿದ್ದಾಳೆ. ಈ ದೂರು ಜೂನ್ 22ರಂದು ದಾಖಲಾಗಿದೆ.
ಆದರೆ, ಯುವತಿ ಮಾಡಿದ ಎಲ್ಲಾ ಆರೋಪಗಳನ್ನ ನಿಪೋನ್ ಅಲ್ಲಗಳೆದಿದ್ದಾರೆ. ಈ ಯುವತಿ ತನ್ನನ್ನ ರಾಷ್ಟ್ರೀಯ ಅಂತಾರಾಜ್ಯಗಳ ಚಾಂಪಿಯನ್ ಶಿಪ್ಗೆ ಸೆಲೆಕ್ಟ್ ಮಾಡದೇ ಇರುವುದರಿಂದ ಈ ರೀತಿ ಪ್ರತೀಕಾರ ತೀರಿಸಿಕೊಳ್ಳುವ ಯತ್ನ ಮಾಡ್ತಿದ್ದಾರೆ ಎಂದು ನಿಪೋನ್ ಪ್ರತ್ಯಾರೋಪ ಮಾಡಿದ್ದಾರೆ.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 