ಸುಳ್ಳು ಗ್ಯಾರಂಟಿಗಳಿಂದ ಬಡವರ ಅನ್ನಕ್ಕೆ ಕೈ
Helping the poor with false guarantees
ಆಲಮೇಲ 28: ರಾಜ್ಯ ಸರ್ಕಾರ ಇತ್ತೀಚಿಗೆ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಲು ಆರಂಭಿಸಿರುವುದು ಸರಕಾರದ ಸಂಪೂರ್ಣ ವಿಫಲತೆಯ ಜೀವಂತ ಸಾಕ್ಷಿ.ಈಗಾಗಲೇ ಬೊಕ್ಕಸ ಖಾಲಿಯಾಗಿರುವ ಪರಿಸ್ಥಿತಿಯಲ್ಲಿ. ಸುಳ್ಳು ಪಂಚೆ ಗ್ಯಾರಂಟಿಗಳ ಮೂಲಕ ರಾಜ್ಯವನ್ನು ದೇವಾಳಿ ಮಾಡಿದ ನಂತರ ಈ ಸರಕಾರ ಈಗ ಬಡವರ ಹೊಟ್ಟೆಗೆ ಕೈ ಹಾಕುವ ಮಟ್ಟಕ್ಕೆ ಇಳಿಯ ಬಹುಬಂದಿದೆ. ಇದು ಅತ್ಯಂತ ಖಂಡನಿಯ ಮತ್ತು ಸಂವೇಧನಾ ಶೀಲತೆಯ ಕೊರತೆಯ ಆಡಳಿತ.ಪಡಿತರ ಚೀಟಿ ಬಡ ಕುಟುಂಬಗಳಿಗೆ ಕೇವಲ ಒಂದು ದಾಖಲೆ ಅಲ್ಲ.ಅದು ಜೀವನ ಅನ್ನ ಬಾಳಿನ ಭರವಸೆ. ಇದೆನ್ನು ರದ್ದುಪಡಿಸುವ ಮೂಲಕ ಸರಕಾರ ಬಡವರನ್ನು ಮತ್ತಷ್ಟು ತೀವ್ರಗೊಳಿಸಲು ಕಾರಣವಾಗುತ್ತಿದೆ.
ಸರಕಾರ ನಿಭಾಯಿಸಲು ಆಗದೆ ಹೋದರೆ ರಾಜೀನಾಮೆ ಕೊಡಲಿ ಮನೆಗೆ ಹೋಗಲಿ.ಬಡವರ ಜೀವನದೊಂದಿಗೆ ಆಟ ಆಡುವ ಹಕ್ಕು ಯಾರಿಗೂ ಇಲ್ಲ. ಇನ್ನು ದುಃಖಕರ ಸಂಗತಿ ಏಕೆಂದರೆ. ಶ್ರೀಮಂತರ ಕಾರ್ಡಗಳನ್ನು ಅಚ್ಚುಕಟ್ಟಾಗಿ ಇಟ್ಟು ಬಹುತೇಕ ಬಡವರ ಕಾಡುಗಳನ್ನು ಮಾತ್ರ ರದ್ದು ಪಡಿಸುವುದು ಸರಕಾರದ ದ್ವಂದ್ವ ನಿಲುವಿನ ಹಾಗೂ ಅಸಮಾನತೆಯ ನೀತಿಯ ಸೃಷ್ಟಿ ನಿರ್ದೇಶನ. ಬಡಜನರ ಮೇಲಿನ ಈ ರೀತಿ ಅನ್ಯಾಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.ಇಷ್ಟು ದಿನ ಅದೃಷ್ಟ ಬರಗಾಲ. ಉದ್ಯೋಗ ಕೊರತೆ. ಕೃಷಿ ಸಂಕಷ್ಟ್ ಇದರ ಮೇಲೆ ಪಡಿತರ ರದ್ದು ಎಂಬ ನಿರ್ಧಾರ ಬಡವರ ಜೀವನದ ಮೇಲೆ ನೇರ ದಾಳಿ. ಈ ಕ್ರಮವನ್ನು ಸರಕಾರ ತಕ್ಷಣ ಹಿಂಪಡೆಯಬೇಕು. ಬಡವರ ಅನ್ನ ಹಾಗೂ ಅವರ ಹಕ್ಕು ಕಸಿದುಕೊಳ್ಳುವುದನ್ನು ಎಂದಿಗೂ ಸಹಿಸುವುದಿಲ್ಲ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 