ಚಿಕ್ಕೋಡಿ 15: ಮೆಟಾಸ್ಟಾಟಿಕ್ ನ್ಯೂರೋಬ್ಲಾಸ್ಟೋಮಾ ಕ್ಯಾನ್ಸರ್‌ನಿಂದ ಬಳಲುತ್ತಿರುವ ಚಿಕ್ಕೋಡಿ ಪಟ್ಟಣದ ಸಮರ್ಥ್ ಪ್ರಕಾಶ ಸಾವಂತ ಎಂಬ ಬಾಲಕನಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಅಗತ್ಯವಿದೆ.
ಚಿಕ್ಕೋಡಿ ಪಟ್ಟಣದ ನಿವಾಸಿಯಾದ ಪ್ರಕಾಶ ತಾನಾಜಿ ಸಾವಂತ ಇವರು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು ಇವರು ಮಧ್ಯಮ ಕುಟುಂಬ ನಿವಾಸಿಗಳಾಗಿದ್ದು ಇವರ ಪುತ್ರ ಸಮರ್ಥ ಪ್ರಕಾಶ ಸಾವಂತ ಇವನು ಮೆಟಾಸ್ಟಾಟಿಕ್ ನ್ಯೂರೋಬ್ಲಾಸ್ಟೋಮಾ ಕಾನ್ಸರ್‌ನಿಂದ ಬಳಲುತ್ತಿದ್ದು ಬಾಲಕನಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಅಗತ್ಯವಿದೆ. ಬಾಲಕ ಸಮರ್ಥಗೆ ಒಂದು ವರ್ಷದಿಂದ ಪುಣೆಯ ಮಿಲಟರಿ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈತನಿಗೆ ನೀಡಬೇಕಾದ ಚುಚುಚ್ಚುಮದ್ದು ಭಾರತದಲ್ಲಿ ಲಭ್ಯವಿಲ್ಲದ್ದರಿಂದ ಇದನ್ನು ವಿದೇಶದಿಂದ ತರಿಸಬೇಕಾಗುತ್ತಿದೆ. ಇದಕ್ಕೆ ತಗಲುವ ವೆಚ್ಚ ಸುಮಾರು 70,00,000/- ಲಕ್ಷ ರೂ. ಬೇಕಾಗಿರುತ್ತದೆ.
ಸದ್ಯ ಬಾಲಕನ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಬೇಕಾಗಿದ್ದು ವೈದ್ಯಕೀಯ ವೆಚ್ಚಕ್ಕಾಗಿ ತಾವುಗಳು ಸಹೃದಯರಿಂದ ಆರ್ಥಿಕ ನೆರವು ನೀಡಬೇಕಾಗಿದೆ. ಸಹೃದಯಗಳು ತಮ್ಮಿಂದ ಆದಷ್ಟು ಆರ್ಥಿಕ ನೇರವು ನೀಡಬೇಕು. ನೆರವು ನೀಡ ಬಯಸುವವರು ಬಾಲಕನ ತಂದೆ ಪ್ರಕಾಶ ತಾನಾಜಿ ಸಾವಂತ ಅವರ ಕೆನರಾ ಬ್ಯಾಂಕ ಖಾತೆ ಸಂ.05092250032035 (ಐಎಫ್‌ಎಸ್ಸಿ. ಸಿಎನ್‌ಆರ್‌ಬಿ 0010509) - ಇಲ್ಲಿಗೆ ವರ್ಗಾಯಿಸಬಹುದು. ಪ್ರಕಾಶ ಸಾವಂತ ಅವರ ಮೋ. ನಂ: 9149676387 ಇರುತ್ತದೆ.