ಸೈಬರ್ ಕ್ರೈಂ ಅಪರಾಧ ತಡೆ ಅರಿವು ನೆರವು ಜರುಗಿತು

ಸೈಬರ್ ಕ್ರೈಂ ಅಪರಾಧ ತಡೆ ಅರಿವು ನೆರವು ಜರುಗಿತು Held Cybercrime prevention awareness campaign

ಹುಕ್ಕೇರಿ  26:ಎಸ್‌ಎನ್‌ಜೆಪಿಎಸ್‌ಎನ್‌ಎಂಎಸ್ ಟ್ರಸ್ಟ್‌ ಪದವಿ ಮಹಾವಿದ್ಯಾಲಯದಲ್ಲಿ ಪಾಲಕರ ಸಭೆಯನ್ನು ಭಾನುವಾರ ಏರಿ​‍್ಡಸಲಾಗಿತ್ತು. ವೇದಿಕೆಯನ್ನು ಅಲಂಕರಿಸಿದ್ದ ಎಲ್ಲರಿಗೂ ಹೂಗುಚ್ಚ ನೀಡಿ ಗೌರವಿಸಲಾಯಿತು.ಪಾಲಕರ ಪ್ರತಿನಿಧಿಯಾಗಿ ಹಾಜರಿದ್ದ   ಸುಪ್ರಿಯಾ ಮಜತಿಯವರು ಮಾತನಾಡಿ, “ತಮ್ಮ ಮಕ್ಕಳಲ್ಲಿ ಶಿಕ್ಷಣದ ಮೂಲಕ ಕಂಡುಬಂದ ಬದಲಾವಣೆಗಳನ್ನು ಕಂಡು ತುಂಬಾ ಸಂತೋಷವಾಗಿದೆ” ಎಂದು ಅಭಿಪ್ರಾಯ ಹಂಚಿಕೊಂಡರು.ಮುಖ್ಯ ಅತಿಥಿಯಾಗಿ ಹಾಗೂ ಪಾಲಕರ ಪ್ರತಿನಿಧಿಯಾಗಿ ಮಾತನಾಡಿದ   ಎಂ.ವೈ. ಬಡಿಗೇರ್ ಅವರು “ವಿದ್ಯಾರ್ಥಿಗಳ ಜೀವನದ ಹೊಣೆ ಕೇವಲ ಶಿಕ್ಷಕರದಲ್ಲ, ತಂದೆ-ತಾಯಿಯರೂ ಸಮಾನ ಹೊಣೆ ಹೊತ್ತು ಕಾರ್ಯನಿರ್ವಹಿಸಬೇಕು” ಎಂದು ಅಭಿಪ್ರಾಯಪಟ್ಟರು.  

ಪಾಲಕರ ಪ್ರತಿನಿಧಿಯಾಗಿ ಭಾಗವಹಿಸಿದ್ದ   ಸುಪ್ರಿಯಾ ಮಜತಿಯವರು “ಮಕ್ಕಳಲ್ಲಿ ಶಿಕ್ಷಣದ ಮೂಲಕ ಕಂಡುಬಂದ ಬದಲಾವಣೆಗಳಿಂದ ತುಂಬಾ ಸಂತೋಷವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಬಸವರಾಜ್ ಹಾಲಬಾವಿ ಅವರು ಮಾತನಾಡಿ, “ಶಿಕ್ಷಣವು ಒಂದು ಶಸ್ತ್ರದಂತೆ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಜೀವನದ ಎಲ್ಲ ಸಾಧನೆಗಳನ್ನು ಸಾಧಿಸಿ, ತಾವು ತಮ್ಮ ಹೆತ್ತವರಿಗೆ, ಮನೆಯವರಿಗೆ ಹಾಗೂ ನಾಡಿಗೆ ಕೀರ್ತಿ ತರುವಂತಹ ವಿದ್ಯಾರ್ಥಿಗಳಾಗಿ ಹೊರಹೊಮ್ಮಬಹುದು” ಎಂದು ಹೇಳಿದರು. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟೊಂದು ಅವಶ್ಯಕವಾಗಲಿದೆ ಎಂಬುದನ್ನು ವಿವರಿಸಿ, “ಒಬ್ಬ ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮಿದರೆ ಕುಟುಂಬದ ಗೌರವ ಹೆಚ್ಚುವುದು, ಸಮಾಜದಲ್ಲಿ ಮನೆತನದ ಪರಿಚಯ ವಿಸ್ತರಿಸುವುದು” ಎಂದು ಅಭಿಪ್ರಾಯಪಟ್ಟರು.ಅವರು ಮುಂದುವರಿದು, “ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯವು ಅತಿ ಆತ್ಮೀಯವಾದದ್ದು.  

ಸಹಕಾರ ಹಾಗೂ ಸಹಭಾಗಿತ್ವದ ಮನೋಭಾವನೆಯಿಂದ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಗುರಿ ತಲುಪುವುದು ಖಂಡಿತ” ಎಂದು ಹೇಳಿದರು.ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಅಗತ್ಯವನ್ನು ಒತ್ತಿ ಹೇಳುತ್ತಾ, “ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮಿದರೆ ಕುಟುಂಬದ ಗೌರವ ಹೆಚ್ಚುವುದು, ಸಮಾಜದಲ್ಲಿ ಮನೆತನದ ಪರಿಚಯ ವಿಸ್ತರಿಸುವುದು” ಎಂದರು.ಈ ಸಂದರ್ಭದಲ್ಲಿ ಸೈಬರ್ ವಾರಿಯರ್ ತಂಡದ ವಿದ್ಯಾರ್ಥಿನಿಯರು ನವದುರ್ಗೆಯರ ವೇಷ ಭೂಷಣ ದೊಂದಿಗೆ , “ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?” ಎಂಬುದನ್ನು ನಾಟಕೀಯವಾಗಿ ಪ್ರದರ್ಶಿಸಿದರು. ಸೈಬರ್ ವಂಚನೆಯ ಅಪಾಯಗಳ ಕುರಿತು ಕನ್ನಡ ಉಪನ್ಯಾಸಕರಾದ ಶ್ರೀ ವಿರೂಪಾಕ್ಷಯ್ಯ ಮಠಪತಿಯವರು ಉಪನ್ಯಾಸ ನೀಡಿದರು. 

ಸಭೆಯಲ್ಲಿ ಪಾಲಕರೂ ತಮ್ಮ ಅಭಿಪ್ರಾಯ ಹಂಚಿಕೊಂಡು, “ಸಂಸ್ಥೆಯು ನೀಡುತ್ತಿರುವ ಶಿಕ್ಷಣ, ಜ್ಞಾನ ಹಾಗೂ ಕಲಿಕಾ ಸೌಲಭ್ಯಗಳಿಂದ ನಾವು ಸಂತೋಷಪಟ್ಟಿದ್ದೇವೆ” ಎಂದು ತೃಪ್ತಿ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಮುಖ್ಯಸ್ಥರಾದ   ಶಿಲ್ಪಾ ಪಾಟೀಲ, ಪ್ರೊ. ಕವಿತಾ ಚೌಹಾಣ್, ಪ್ರೊ. ವಿ.ಎಮ್‌. ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲ್ಲದೆ ಎಲ್ಲ ಉಪನ್ಯಾಸಕರು, ಉಪನ್ಯಾಸಕಿಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.