ಹೆಡಿಯಾಲ: ವರುಣನ ಕೃಪೆಗಾಗಿ ಕತ್ತೆ ಮೆರವಣಿಗೆ

ರಾಣೇಬೆನ್ನೂರು-ಮೇ.25: ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಮಳೆಯ ಆಗಮನಕ್ಕಾಗಿ  ಕತ್ತೆ ಮೆರವಣಿಗೆ ಮಾಡಲಾಯಿತು. ಮುಂಗಾರು ಪೂರ್ವ ಮಳೆ ಆಗದೆ ರೈತರು ಆತಂಕಗೊಂಡಿದ್ದರು. ಕತ್ತೆ ಮೆರವಣಿಗೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಯುವಕರು ಕತ್ತೆಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಆರಂಭಕ್ಕೆ ಕತ್ತೆಗೆ ಬೇವಿನ ಎಲೆಯಿಂದ ಶೃಂಗರಿಸಿ ಹೂ ಮಾಲೆ ಹಾಕಲಾಯಿತು. ಆನಂತರ ಹಲಗೆ ಬಾರಿಸುತ್ತಾ ಕತ್ತೆಯನ್ನು ಗ್ರಾಮದಲ್ಲಿ ಸಂಚರಿಸಲಾಯಿತು. ಮಳೆ ಇಲ್ಲದೇ ಜನ-ಜಾನುವಾರುಗಳ ಪರಿಸ್ಥಿತಿ ಗಂಭೀರವಾಗಿದೆ. ವರುಣ ದೇವ ಬೇಗ ಕೃಪೆ ತೋರಿ ಮಳೆ ನೀಡಬೇಕು ಎಂದು ಗ್ರಾಮಸ್ಥರು ಆ ಭಗವಂತನಲ್ಲಿ ಸಾಮೂಹಿಕವಾಗಿ ಪ್ರಾಥರ್ಿಸಿದರು.