ಕಾರವಾರ ಮಳೆ: ಕಾರವಾರ ಬಸ್ ಡಿಪೋ ಜಲಮಯ
Heavy rain from eight to nine in the morning
ಕಾರವಾರ 18: ಉತ್ತರ ಕನ್ನಡ ಕರಾವಳಿಯಲ್ಲಿ ಶುಕ್ರವಾರ ಮಳೆ ಮುಂದುವರಿದಿದೆ . ಕಾರವಾರದಲ್ಲಿ ಬೆಳಿಗ್ಗೆ ಎಂಟರಿಂದ ಒಂಬತ್ತು ಗಂಟೆ ತನಕ ಭಾರೀ ಮಳೆ ಸುರಿಯಿತು. ಕಾರವಾರ ಬಸ್ ಡಿಪೋ ಸೇರಿದಂತೆ ತಗ್ಗು ಪ್ರದೇಶಗಳಾದ ನ್ಯೂ ಕೆಎಚ್ ಬಿ ಕಾಲೂನಿ ಜ್ಞಾನೇಶ್ವರಿ ವಿದ್ಯಾಮಂದಿರ, ಗುನಗಿವಾಡದ ಕೆಲಭಾಗ ,ಸಂಕ್ರೀವಾಡ, ಮತ್ತೆ ಜಲಮಯವಾದವು .
ಮಳೆ ಕಡಿಮೆಯಾದ ಒಂದು ತಾಸಿನಲ್ಲಿ ಜಲಾವೃತ ಪ್ರದೇಶಗಳು ಸಹಜ ಸ್ಥಿತಿಗೆ ಬಂದವು. ಕಡವಾಡ ,ಕಿನ್ನರ, ಕಣಜಗೇರಿ ಕೆಲ ಪ್ರದೇಶ ಜಲಾವೃತವಾಗಿದ್ದವು. ಗುರುವಾರ ದಿಂದ ಶುಕ್ರವಾರ ಬೆಳಗಿನ ಎಂಟುಗಂಟೆ ಹೊತ್ತಿಗೆಭಟ್ಕಳದಲ್ಲಿ 52.8 , ಹಳಿಯಾಳ 2.9, ಹೊನ್ನಾವರ 73.1, ಕಾರವಾರ 59.6, ಮಿಲಿ ಮೀಟರ್ ಮಳೆ ಸುರಿದಿದ್ದು , ಶುಕ್ರವಾರ ಹಗಲು ಮಳೆ ಮುಂದುವರಿದಿತ್ತು. ದಾಂಡೇಲಿ ,ಶಿರಸಿ, ಯಲ್ಲಾಪುರ ಅರೆಬೈಲ ಘಟ್ಟದಲ್ಲಿ ಸತತ ಮಳೆ ಬೀಳುತ್ತಿತ್ತು. ಅಣಶಿ, ದೇವಿಮನೆ ಘಟ್ಟ, ಮನೆಮನೆ ಘಟ್ಟದಲ್ಲಿ ಮಳೆ ಬಿರುಸಾಗಿತ್ತು.ಹೊನ್ನಾವರದಲ್ಲಿ ಅತೀ ಹೆಚ್ಚು ಮಳೆಯಾಗಿದೆ . ಯಾವುದೇ ಜೀವ ಹಾನಿಯಾಗಿಲ್ಲ. ಭಟ್ಕಳ, ಕಾರವಾರ, ಹೊನ್ನಾವರ, ಕುಮಟಾದಲ್ಲಿ ಹೆಚ್ಚು ಮಳೆಯಾದರೆ, ಅಂಕೋಲಾದಲ್ಲಿ ಸಾಧಾರಣ ಮಳೆಯಾಗಿದೆ. ಘಟ್ಟದ ಮೇಲೆ ಹಿತಕರ ಮಳೆ ಮುಂದುವರಿದಿದೆ. ಸಂಪ್ರದಾಯಿಕ ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ಮಳೆ ನಾಲ್ಕು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆ ವಿವರ : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 36.2, ಮಿಮೀ, ಭಟ್ಕಳದಲ್ಲಿ 52.8 , ಹಳಿಯಾಳ 2.9, ಹೊನ್ನಾವರ 73.1, ಕಾರವಾರ 59.6, ಕುಮಟಾ 48.9, ಮುಂಡಗೋಡ 3.3, ಸಿದ್ದಾಪುರ 23.9, ಶಿರಸಿ 15.3, ಸೂಪಾ 31.7, ಯಲ್ಲಾಪುರ 5.2, ದಾಂಡೇಲಿಯಲ್ಲಿ 7.9, ಮಿಲಿ ಮೀಟರ್ ಮಳೆ ಸುರಿದಿದೆ..
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 