ಭಾರಿ ಮಳೆ, ಪೋರ್ಚುಗಲ್ನಲ್ಲಿ ಪ್ರವಾಹ

ಲಿಸ್ಬನ್, ಆಗಸ್ಟ್ 27   ಭಾರಿ ಮಳೆಯಿಂದಾಗಿ ಲಿಸ್ಬನ್ನ ದಕ್ಷಿಣದ ಅಲೆಂಟೆಜೊದ 20 ಕ್ಕೂ ಹೆಚ್ಚು  ವಸತಿಪ್ರದೇಶ  ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಪ್ರವಾಹ  ಉಂಟಾಗಿ, ಜನಜೀವನ ಬಾಧಿತವಾಗಿದೆ ಎಂದು ಪೋರ್ಚುಗೀಸ್ ಲೂಸಾ ಸುದ್ದಿ ಸಂಸ್ಥೆ ವರದಿ ಮಾಡಿದೆ.    ಪರಿಹಾರ  ತಂಡದ  ಅಧಿಕಾರಿ ನೀಡಿದ ಮಾಹಿತಿ ಪ್ರಕಾರ ಸೋಮವಾರ 8ರಿಂದ 10 ಗಂಟೆಯವರೆಗೆ  ಸುರಿದ ಮಳೆಯಿಂದ ಅನೇಕ ಕಡೆ  ಪ್ರವಾಹ ಉಂಟಾಗಿದೆ.  ಐತಿಹಾಸಿಕ ಕೇಂದ್ರದಲ್ಲಿ ವಾಸಿಸುತ್ತಿದ್ದ 76 ವರ್ಷದ ಮಹಿಳೆಯನ್ನು ಸ್ಥಳಾಂತರ ಮಾಡಿ ನಂತರ  ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು  ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ. ಮಳೆ , ಪ್ರವಾಹದ ಕಾರಣ  ನಗರದ ಹಲವು  ಭಾಗಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.