ಅಪಾರ ಮಳೆ : ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ
Heavy rain: JCB clears water
ಸಿಂದಗಿ 29: ಪಟ್ಟಣದಲ್ಲಿ ಸುಮಾರು ದಿನಗಳಿಂದ ಆಗುತ್ತಿರುವ ಅಪಾರ ಮಳೆಯಿಂದಾಗಿ ಲೇಓಟ್ ಬಳಿ ನೀರು ತುಂಬಿಕೊಂಡಿದ್ದು ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪುರಸಭೆ ಅಧ್ಯಕ್ಷ ಡಾ:ಶಾಂತವೀರ ಮನಗೂಳಿ ಮಾಡಿದರು.
ಸಿಂದಗಿ; ಪಟ್ಟಣದಲ್ಲಿ ಸುಮಾರು ದಿನಗಳಿಂದ ಆಗುತ್ತಿರುವ ಅಪಾರ ಮಳೆಯಿಂದಾಗಿ ಇಂದು ವಾರ್ಡ್ ಸಂಖ್ಯೆ 19ರ ಓಂ ನಗರದ ಕುಲಕರ್ಣಿ ಲೇಓಟ್ ಬಳಿ ನೀರು ತುಂಬಿಕೊಂಡಿದ್ದು ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪುರಸಭೆ ಅಧ್ಯಕ್ಷ ಡಾ:ಶಾಂತವೀರ ಮನಗೂಳಿ ಮಾಡಿದರು.
ವಾರ್ಡ್ ನಂ 10ರಲ್ಲಿ ಮನೆಗಳು ಬಿದ್ದಿರುವುದರಿಂದ ಆ ವಾರ್ಡಿನ ಜನರ ಸಮಸ್ಯೆ ಆಲಿಸಲು ಬಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಪರಿಹಾರ ಕಲ್ಪಿಸಲು ಸೂಚಿಸಿದರು. ವಾರ್ಡ್ ಸಂಖ್ಯೆ 14 ರ ಕರ್ನಾಟಕ ಬ್ಯಾಂಕ್ ಹಿಂದುಗಡೆ ನೀರು ತುಂಬಿಕೊಂಡಿದ್ದು ಸಂಚಾರಕ್ಕೆ ಅನುಕೂಲವಾಗುವಂತೆ ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಕಿರಿಯ ಅಭಿಯಂತರ ಎ.ಜೆ.ನಾಟೀಕಾರ, ಸಿನಿಯಟರಿ ಅಧಿಕಾರಿ ನಭಿರಸೂಲ ಉಸ್ತಾದ, ಸದಸ್ಯ ಸಿದ್ದು ಮಲ್ಲೇದ, ದುರೀಣರಾದ ಭೀಮನಗೌಡ ಬಿರಾದಾರ,ಶಿಕ್ಷಕ ಪೋದ್ದಾರ ಸೇರಿದಂತೆ ವಾರ್ಡುಗಳ ಜನರು ಸಮಸ್ಯೆಗಳನ್ನು ವಿವರಿಸುವಲ್ಲಿ ಸಹಕಾರಿಯಾದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 