ಆಗ್ನೇಯ ದೆಹಲಿಯ ತುಘಲಕಾಬಾದ್ ಕೊಳಗೇರಿಯಲ್ಲಿ ಭಾರಿ ಬೆಂಕಿ ಅವಘಡ

ನವದೆಹಲಿ, ಮೇ ೨೬, ಆಗ್ನೇಯ  ದೆಹಲಿಯ ತುಘಲಕಾಬಾದ್ ಪ್ರದೇಶದ ಕೊಳಗೇರಿಯಲ್ಲಿ  ಮಂಗಳವಾರ  ಭಾರಿ ಪ್ರಮಾಣದ ಅಗ್ನಿ ಅವಘಡ  ಉಂಟಾಗಿದೆ  ಎಂದು ಅಗ್ನಿ ಶಾಮಕ ಇಲಾಖೆ ಹೇಳಿದೆ.
ಮಂಗಳವಾರ  ೧೨.೫೫ರಲ್ಲಿ  ಬೆಂಕಿ ಅವಗಡದ ಬಗ್ಗೆ ಮಾಹಿತಿ ಸ್ವೀಕರಿಸಿದ, ತಕ್ಷಣವೇ ೨೬ ಆಗ್ನಿ  ಶಾಮಕ ಯಂತ್ರಗಳನ್ನು  ಸ್ಥಳಕ್ಕೆ ರವಾನಿಸಲಾಗಿದೆ. ಬೆಳಗಿನ ಜಾವ ಮೂರು ಗಂಟೆಗೆ ಬೆಂಕಿಯನ್ನು ನಂದಿಸಲಾಗಿದೆ ಎಂದು  ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈವರೆಗೆ, ಯಾವುದೇ  ಸಾವು ನೋವು ವರದಿಯಾಗಿಲ್ಲ  ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.ಅಧಿಕಾರಿಗಳು  ಸ್ಥಳದಲ್ಲಿ ಮೊಕ್ಕಂ ಹೂಡಿದ್ದು  ಮುಂದಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬರಬೇಕಿದೆ.