ಸಕಲ ಆರೋಗ್ಯಕ್ಕೆ ಹೃದಯ ಆರೋಗ್ಯವೆ ಮೂಲ: ಡಾ. ಗುಂಡಪ್ಪ ನಾಯಕ
Heart health is essential for overall health Source: Dr. Gundappa Nayak
ಲೋಕದರ್ಶನ ವರದಿ
ಹುಬ್ಬಳ್ಳಿ 28: ಆಧುನಿಕ ಜೀವನ ಶೈಲಿಯಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೇಂದ್ರಗಳು ಹೃದಯ ಸಂಬಂಧಿತ ಮಾಹಿತಿಯನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನೀಯರಿಗೆ ಮಾಹಿತಿ ನೀಡುವುದು ಈ ಸಂದರ್ಭದ ಅತಿ ಅವಶ್ಯಕವಾಗಿದೆ ಎಂದು ಸುಚಿರಾಯು ಆಸ್ಪತ್ರೆಯ ವೈದ್ಯರಾದ ಡಾ. ಗಜೇಂದ್ರ ಹೇಳಿದರು.
ಅವರು ದಿ. 27ರಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಗದಗ ಐಕ್ಯೂಎಸಿ ಪ್ರಾಯೋಜತ್ವದಲ್ಲಿ ಗ್ರಂಥಾಲಯ ವಿಭಾಗ, ಎನ್‌ಎಸ್‌ಎಸ್, ರೆಡ್ ರಿಬ್ಬನ್ ಮತ್ತು ಸುಚಿರಾಯು ಆಸ್ಪತ್ರೆ, ಹುಬ್ಬಳ್ಳಿ, ಮೇರವಾಡೆ ಕಣ್ಣಿನ ಆಸ್ಪತ್ರೆ, ಗದಗ, ಜಿಯಾಂಟ್ಸ್ ಸಖಿ ಸಹೇಲಿ ಗ್ರುಫ್ಸ್ ಹಾಗೂ ಗ್ರಾಮ ಪಂಚಾಯತಿ ಬೆಳದಡಿ ಇವರ ಸಂಯೋಗದಲ್ಲಿ ಬೆಳದಡಿ ತಾಂಡೆಯಲ್ಲಿ ಏರಿ್ಡಸಲಾದ ಹೃದಯ ತಪಾಸಣಾ ಶಿಬಿರ ಹಾಗೂ ಕಣ್ಣಿನ ತಪಾಸಣಾ ಶಿಬಿರದಲ್ಲಿ ಮಾತನಾಡಿ ಇಂತಹ ಶಿಬಿರಗಳನ್ನು ಮತ್ತೆ ಮತ್ತೆ ಆಯೋಜಿಸಿ ಸಾರ್ವಜನಿಕರಿಗೆ ಹೃದಯದ ಆರೋಗ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಹೇಳುತ್ತಾ, ಈ ಶಿಬಿರದ ಸದುಪಯೋಗವನ್ನು ಗ್ರಾಮ ಪಂಚಾಯತಿ ಬೆಳದಡಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಈ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಡಾ. ಗುಂಡಪ್ಪ ನಾಯಕ ಗ್ರಂಥಪಾಲಕರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಗದಗ ಇವರು ಪ್ರಸ್ತುತ ದಿನಮಾನದಲ್ಲಿ ಗ್ರಂಥಾಲಯಗಳು ಪುಸ್ತಕ ಮಾಹಿತಿ ಹಂಚುವುದರ ಜೊತೆಗೆ ಇಂತಹ ಸ್ವಸ್ಥ ಸಮಾಜ ನಿರ್ಮಾಣ ಮಾಡಲಿಕ್ಕೆ ಇಂತಹ ಕಾರ್ಯಕ್ರಮಗಳ ಮೂಲಕ ಉತ್ತಮ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕೆಂದು ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಾ, ಗ್ರಂಥಾಲಯಗಳ ಸಮಗ್ರ ಮಾಹಿತಿಗಳ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಾ ಇರುವುದು ಎಂದು ತಿಳಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಎರಡು ಆಸ್ಪತ್ರೆಗಳ ವೈದ್ಯಕೀಯ ತಂಡದವರು ಹಾಗೂ ಸಖಿ ಸಹೇಲಿ ಗ್ರೂಫ್‌ನ ಕಾರ್ಯದರ್ಶಿಯಾದ ಹೇಮಲತಾ ಪುಂಗಾಲಿಯಾ ಹಾಗೂ ತಂಡದವರು ಉಪಸ್ಥಿತರಿದ್ದು, ಜೊತೆಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೇಶವಮೂರ್ತಿ ರಾಠೋಡ, ನಿಕಟಪೂರ್ವ ಗ್ರಾಮ ಪಂಚಾಯತಿ ಬೆಳದಡಿ ಸದಸ್ಯರಾದ ಶಿವಪ್ಪ ಟೋಪಣ್ಣ ನಾಯಕ, ರೂಪವ್ವ ಜಾಧವ್ ಹಾಗೂ ಈ ಸಮಾರಂಭದ ಅಧ್ಯಕ್ಷರಾದ ಚಂದು ನಾಯಕ, ಈಶ್ವರನಾಯಕ ನಾಯಕ ಹಾಗೂ ಗ್ರಾಮದ ಹಿರಿಯರಾದ ಕಬೇರ್ಪ ಪವಾರ, ಗ್ರಾಮದ ಹಿರಿಯರು, ಯುವಕ ಮಿತ್ರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 