ಆರೋಗ್ಯ ಮಾನವನ ಉಸಿರಾಟದ ನಾಡಿ : ಶ್ರೀಧರ ಎನ್. ಸುಲ್ತಾನಪೂರ
Health is the pulse of human respiration: Sridhar N. Sultanpura
ಗದಗ 09 : ನಗರದ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಎನ್. ಎಸ್. ಎಸ್. ಘಟಕದವತಿಯಿಂದ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನವನ್ನು ವಿವಿಧ ಕಾರ್ಯಗಳಿಂದ ಪುರ್ಣಗೊಳಿಸಿದರು.ಮುಂಜಾನೆ ಧ್ವಜಾರೋಹಣದ ನಂತರದಲ್ಲಿ ಎಲ್ಲ ಎನ್. ಎಸ್. ಎಸ್. ಸ್ವಯಂಸೇವಕರು ಶ್ರಮದಾನಕ್ಕೆತೆರೆಳಿದರು, ಹೊಂಬಳ ಮಹಿಳಅ ಪ್ರಾರ್ಥಮಿಕ ಶಾಲೆಯಲ್ಲಿ ಶ್ವಚ್ಛತಾ ಕಾರ್ಯ ಮಾಡಿದರು ಮತ್ತು ಸಂಗ್ರಹಿಸಲಾದ ತ್ಯಾಜ್ಯವನ್ನು ಪಂಚಾಯತಿಯವರ ಸಹಾಯದಿಂದ ತ್ಯಾಜ್ಯ ಸಂಗ್ರಹಾರಕ್ಕೆ ವಿಲೆವಾರಿ ಮಾಡಲಾಹಿತು.
ಮಧ್ಯಾಹ್ನ 03:00 ಕ್ಕೆ ರೋಟರಿ ಕ್ಲಬ್ ಗದಗ-ಬೇಟಗೇರಿ ವತಿಯಿಂದ ಉಚಿತವಾಗಿ ದಂತ, ಸಾಮಾನ್ಯ ಮತ್ತು ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಉಚಿತ ತಪಾಸಣಾ ಶಬಿರದಲ್ಲಿ ಸರಾಸರಿ 34-40 ಪಲಾನುಭವಿಗಳು ಚಿಕಿತ್ಸೆ ಪಡೆದುಕೊಂಡರು. ಈ ಆರೋಗ್ಯ ತಪಾಸಣೆಯನ್ನು ಡಾ. ಆರ್. ಬಿ. ಉಪ್ಪಿನ್, ದಂತ ವೈದ್ಯರು, ಡಾ. ಕಮಲಾಕ್ಷಿ ಅಂಗಡಿ, ವೈದ್ಯರು, ಡಾ. ರುದ್ರೇಶ, ನೇತ್ರ ತಜ್ಞರು ನೆಡೆಸಿಕೊಟ್ಟರು.
ಸಂಜೆಆರೋಗ್ಯ ಮತ್ತು ಗ್ರಾಮೀಣ ಪ್ರದೇಶ ಎಂಬ ವಿಷಯದ ಕುರಿತು ಉಪನ್ಯಾಸ ಮಾಡಲು ಉಪನ್ಯಾಸಕರಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗದಗ ಬೇಟಗೇರಿಯ ರೋಟರಿ ಕ್ಲಬ್ನ ಅಧ್ಯಕ್ಷರಾದ ಶ್ರೀ. ಶ್ರೀಧರ ಎನ್. ಸುಲ್ತಾನಪೂರ ಮಾತನಾಡಿ, ಆರೋಗ್ಯ ಅತೀ ಅವಶ್ಯಕ, ಆರೋಗ್ಯ ಮಾನವನ ಉರಸಿರಾಟದ ನಾಡಿ, ಗದಗ ಜಿಲ್ಲೆಯ ರೋಟರಿ ಕ್ಲಬ್ ನವರು ಅಂಧರಿಗೆ ಆಶ್ರಯ ನೀಡಲು ಶಕ್ಷಣದ ಮೂಲಕ ಅವಕಾಶ ನೀಡಿದ್ದಾರೆ ಎಂದು ತಮ್ಮ ಅಭಿಪ್ರಾಯಗಳನ್ನು ಅಂಚಿಕೊಂಡರು.
ಕಾರ್ಯಕ್ರಮದಲ್ಲಿ ಹೊಂಬಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ. ಹೇಮಾವತಿ ಚೆ. ರೆಡ್ಡೇರ, ಸುರೇಶ ಕುಂಬಾರ, ರೋಟರಿ ಕ್ಲಬ್ ಕಾರ್ಯದರ್ಶಿಗಳು, ಶಿವಾಚಾರ್ಯ ಎಸ್. ಹೊಸಳ್ಳಿಮಠ, ರೋಟರಿ ಕ್ಲಬ್ ಗದಗನವರು, ರಾಹುಲ್ ರಾಠೋಡ್, ಡಾ. ಕಮಲಾಕ್ಷಿ ಅಂಗಡಿ, ವೈದ್ಯರು, ಡಾ. ರುದ್ರೇಶ, ನೇತ್ರ ವೈದ್ಯರು, ಬಾಲಕೃಷ್ಣ ಕಾಮತ, ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕರಾದ ಕುಮಾರ. ಅಪ್ಪಣ್ಣ ಹಡಪದ, ಕುಮಾರಿ. ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿಗಳಾದ ಕುಮಾರ. ಆಕಾಶ ಕಳಗಣ್ಣನವರ, ಕುಮಾರ. ಪ್ರಶಾಂತ ಕಲಬುರ್ಗಿ, ಕುಮಾರ, ಸೋಮಶೇಖರ ಕುರಿ, ಕುಮಾರಿ. ಐಶ್ವರ್ಯ ಶಲವಡಿ ಮತ್ತು ಎನ್. ಎಸ್. ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು, ಕುಮಾರಿ. ಸಾನೀಯಾ ಮುಲ್ಲಾ ಅವರು ನೀರುಪಿಸಿದರು, ಕುಮಾರಿ. ಅಕ್ಷತಾ ದೊಡ್ಡಗೌಡ್ರ ಸ್ವಾಗತಿಸಿದರು, ಕುಮಾರಿ. ರಾಜೇಶ್ವರಿ ಬಾಲನಗೌಡ್ರ ಅವರು ಎಲ್ಲರಿಗೂ ವಂಧಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 