ಕಾಮಗಾರಿ ಸ್ಥಳದಲ್ಲಿಯೇ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ
Health check-up of NREGA workers at the work site
ಲೋಕದರ್ಶನ ವರದಿ
ರಾಣೆಬೆನ್ನೂರು 25: ತಾಲೂಕಿನ ನದಿ ಹರಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕಟ್ಟಿ ಗ್ರಾಮದಲ್ಲಿ ನಡೆದ ನರೇಗಾ ಯೋಜನೆಯಡಿಯಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರವು ಆಯೋಜಿಸಲಾಗಿತ್ತು, ತಪಾಸಣಾ ಶಿಬಿರ ಉದ್ಘಾಟಿಸಿದ ಪಂಚಾಯಿತಿ ಆಡಳಿತಾಧಿಕಾರಿ ರವಿಕಿರಣ್ ಬಿ. ಆರ್.ಅವರು ಮಾತನಾಡುತ್ತಾ ಕಾರ್ಮಿಕರು ಆರೋಗ್ಯವಾಗಿದ್ದರೆ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿವೆ ಅವರ ಆರೋಗ್ಯದ ಕಡೆಗೆ ಗಮನ ಹರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದಾಗಬೇಕು. ಬೇಸಿಗೆ ಸಮಯದ ಇಂತಹ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಿದ್ದು, ಕೆಲಸದ ಜೊತೆಗೆ ಆರೋಗ್ಯ ತಪಾಸಣೆಯು ಅತಿ ಮುಖ್ಯವಾಗಿದೆ ಎಂದರು.
ನರೇಗಾದಡಿ ದುಡಿಯುವ ಕೈಗಳಿಗೆ ಕೆಲಸ ಕೊಡುವುದರ ಜೊತೆಗೆ ಆರೋಗ್ಯ ತಪಾಸಣೆ ಮಾಡಿಸುವ ಜವಾಬ್ದಾರಿಯು ಸಹ ನಮ್ಮ ಪಂಚಾಯಿತಿ ಮೇಲಿದೆ, ಅದಕ್ಕಾಗಿ ತಜ್ಞ ವೈದ್ಯರಿಂದ ಈ ಶಿಬಿರವನ್ನು ಏರಿ್ಡಸಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಶಶಿಧರ್ ಶೇಷಗಿರಿ, ಸಮುದಾಯ ಆರೋಗ್ಯ ನೀರೀಕ್ಷಕ ಶಿವರಾಜ್, ಆರೋಗ್ಯ ಅಧಿಕಾರಿ ಲೋಕೇಶ್, ತಾಲೂಕ ನರೇಗಾತಾಂತ್ರಿಕ ಸಂಯೋಕ ರವಿಕುಮಾರ್ ಯಾಳಗಿ, ತಾಂತ್ರಿಕ ಸಹಾಯಕ ಸಂತೋಷ್ ಐ. ಈ. ಸಿ, ಸಂಯೋಜಕ ದಿಂಗಾಲೇಶ್ ಅಂಗೂರ, ಬಿ.ಎಫ್. ಟಿ. ಹನುಮಂತ ಗೌಡ ಭರಮ ಗೌಡ್ರ, ಸೇರಿದಂತೆ ಆಶಾ ಕಾರ್ಯಕರ್ತರು ಪಂಚಾಯತಿ ಸಿಬ್ಬಂದಿ 45 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 