ಹಜ್ ಯಾತ್ರಿ ಗಳಿಗೆ ಆರೋಗ್ಯ ತಪಾಸಣಾ ಶಿಬಿರ : ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಹೆಲ್ತ್‌ ಕಾರ್ಡ್‌ ವಿತರಣೆ

ಹಜ್ ಯಾತ್ರಿ ಗಳಿಗೆ ಆರೋಗ್ಯ ತಪಾಸಣಾ ಶಿಬಿರ : ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಹೆಲ್ತ್‌ ಕಾರ್ಡ್‌ ವಿತರಣೆ  Health check-up camp for Haj pilgrims: Health cards distributed at Koppal District Hospital

ಕೊಪ್ಪಳ 16: ಇಸ್ಲಾಂ ಧರ್ಮದ ಪವಿತ್ರ ಸ್ಥಳ ವಾದ ಮೆಕ್ಕಾ ಮದೀನಾ ಸ್ಥಳಗಳ ದರ್ಶನ ಹಜ್ ಯಾತ್ರೆಗೆ ತೆರಳುವ ಕೊಪ್ಪಳದ ಶಿಬಿರಾರ್ಥಿ ಗಳಿಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆ ಯ ಲ್ಲಿ ಸೋಮವಾರದಂದು ಆರೋಗ್ಯ ತಪಾಸಣಾ ಶಿಬಿರ ಜರುಗಿತು, ಶಿಬಿರಾರ್ಥಿ ಗಳಿಗೆ ವೈದ್ಯರು ತಪಾಷಣೆ ಮಾಡಿ ನಂತರ ಹೆಲ್ತ್‌ ಕಾರ್ಡ್‌ ವಿತರಣೆ ಮಾಡಿದರು, ಹೆಲ್ತ್‌ ಕಾರ್ಡ್‌ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಹಾಗೂ ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ರವರು ಶಿಬಿರಾರ್ಥಿ ಗಳಿಗೆ ಹೆಲ್ತ್‌ ಕಾರ್ಡ್‌ ವಿತರಿಸಿ ಮಾತನಾಡಿ ಕೊಪ್ಪಳದ ಹಜ್ ಯಾತ್ರಿಗಳು ಪವಿತ್ರ ಸ್ಥಳ ಗಳಾದ ಮೆಕ್ಕಾ ಮದೀನಾ ಸ್ಥಳ ಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಿ ನಮ್ಮ ನಾಡಿಗೆ ಮತ್ತು ದೇಶಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸರ್ವರಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸರ್ವ ಜನರಿಗೆ ಆ ಸೃಷ್ಟಿಕರ್ತನು  ಒಳ್ಳೆಯದನ್ನು ಮಾಡಲಿ ,ನಮ್ಮ ಕೊಪ್ಪಳ ಜಿಲ್ಲೆಯ ಸರ್ವ ಜನರ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಅವರು ಮನವಿ ಮಾಡಿಕೊಂಡರು ಹಾಗೂ ಎಲ್ಲಾ ಹಜ್ ಯಾತ್ರಿಗಳ ಪವಿತ್ರ ಯಾತ್ರೆ ಸುಖಕರವಾಗಲಿ ಯಶಸ್ವಿಯಾಗಿ ಪೂರ್ಣ ಗೊಂಡು ತಾಯಿನಾಡಿಗೆ ಮರಳಲಿ ಎಂದು ಶುಭ ಹಾರೈಸಿದರುಈ ಸಂದರ್ಭದಲ್ಲಿ ಡಾ,ಪ್ರಕಾಶ್, ಡಾ, ನಿಹಾಲ್, ನಿವೃತ್ತ ಉಪ ತಹಶಿಲ್ದಾರ್  ಹಾಗೂ ರಾಬಿತಾ, ಎ, ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಂ ಲಾಯಕ್ ಅಲಿ, ಅಂಜುಮನ್ ಕಮಿಟಿಯ ಅಧ್ಯಕ್ಷ ಎಂ ,ಡಿ, ಆಸಿಫ್ ಕರ್ಕಿಹಳ್ಳಿ, ಸೇರಿದಂತೆ ಹಜ್ ಯಾತ್ರಿಗಳಾದ ಸೈಯದ್ ಗೌಸ್ ಪಾಷಾ ಖಾಜಿ, ಯಾಕೋಬ ಸಾಬ್ ಕಮ್ಮಾರ, ಮೌಲಾಸಾಬ್ ಕಮ್ಮಾರ್, ಅಲ್ಲದೆ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರೂ ಸಹ ಪಾಲ್ಗೊಂಡಿದ್ದರು,