ಸರ್ವೇ ನಂಬರ್ 1029ರಲ್ಲಿ ಮಳಿಗೆ ನಿರ್ಮಿಸಲು ಹೊರಟಿರುವ ನಕ್ಷೆ ಪ್ರದರ್ಶಿಸಿದರು.
He showed the map where the shop is going to be built in survey number 1029.
ಸರ್ವೇ ನಂಬರ್ 1029ರಲ್ಲಿ ಮಳಿಗೆ ನಿರ್ಮಿಸಲು ಹೊರಟಿರುವ ನಕ್ಷೆ ಪ್ರದರ್ಶಿಸಿದರು.
ಸಿಂದಗಿ 28 : ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಖಬ್ರಸ್ಥಾನದ ಜಾಗ ಎಂದು ದಾಖಲೆಯಲ್ಲಿ ಇದ್ದರೆ ಅದು ಸ್ಮಶಾನಕ್ಕೆ ಮಾತ್ರ ಬಳಕೆಯಾಗಬೇಕು. ಅಲ್ಲಿ ಸಮಾಧಿ ಇರಲಿ ಬಿಡಲಿ, ಬೇರೆ ಯಾವುದೇ ಚಟುವಟಿಕೆ ನಡೆಸಬಾರದು. ಹೀಗಿರುವಾಗ ಇಲ್ಲಿ 380 ಅಂಗಡಿಗಳನ್ನು ನಿರ್ಮಿಸಲು ನೀಲಿನಕ್ಷೆಯನ್ನು ಸಿದ್ಧಪಡಿಸಿ, ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ವಕ್ಸ್ ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ದಸ್ತಗೀರ ಮುಲ್ಲಾ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿನ ಸರ್ವೇ ನಂಬರ್ 1029ರಲ್ಲಿರುವ ಖಬ್ರಸ್ಥಾನ ಜಾಗ ಖಬ್ರಸ್ಥಾನಕ್ಕೆ ಉಪಯೋಗಿಸಬೇಕೆಂದು ಆಗ್ರಹಿಸಿ ವಕ್ಸ್ ಆಸ್ತಿ ಸಂರಕ್ಷಣಾ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಸಮಿತಿಯವರ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಪದಾಧಿಕಾರಿಗಳು, ನಕಲಿ ಕಮಿಟಿಯವರು ಸರ್ವೇ ನಂಬರ್ 1029ಕ್ಕೆ ಏನು ಸಂಬಂಧ ಎಂದು ಪ್ರಶ್ನಿಸಿದರು.
ಇಲ್ಲಿ ಕಳೆದ 30-40 ವರ್ಷಗಳಿಂದ ಗೂಡಂಗಡಿಗಳನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದವರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಇದರ ಮಾಲೀಕರು ತಾವು ಎಂದು ಬಿಂಬಿಸಿ ಅವರನ್ನು ಹತ್ತಿಕ್ಕುವಂತಹ ಕೆಲಸ ಮಾಡಿದರು. ಖಬ್ರಸ್ಥಾನ ಜಾಗ ಖಬ್ರಸ್ಥಾನ ಆಗಿಯೇ ಉಳಿಯಬೇಕು ಅನ್ನೋದು ಸುಪ್ರೀಂ ಕೋರ್ಟ್ ಆದೇಶ. ಆದರೆ, ಇವರು ಮತ್ತೆ ಇಲ್ಲಿ ಅನಧಿಕೃತ ಮಳಿಗೆಗಳನ್ನು ನಿರ್ಮಿಸಲು ಹೊರಟಿದ್ದಾರೆ. ವಕ್ಸ್ ಬೋರ್ಡ್ ಇವರಿಗೆ ಕಮಿಟಿ ಮಾಡಿ ಕೊಟ್ಟಿದ್ದು ಸರ್ವೇ ನಂಬರ್ 834 ಹಾಗೂ 1020ರಲ್ಲಿ ನಿರ್ವಹಣೆ ಮಾಡಲು. ಆದರೆ, ಸರ್ವೇ 1029ರಲ್ಲಿ ಶೆಡ್ ನಿರ್ಮಿಸಲು ಪರವಾನಿಗೆ ಕೊಟ್ಟಿದ್ದು ಯಾರು? ಇದೊಂದು ನಕಲಿ, ಬೋಗಸ್ ಕಮಿಟಿ, ಗೆಜೆಟ್ ನಲ್ಲಿನ ಫಾರ್ಮ್ ನಂಬರ್ 42ನಲ್ಲಿ ಸರ್ವೇ ನಂಬರ್ 1020 ಇರುವುದನ್ನು 1029 ಎಂದು ನೀವು ತಿದ್ದಿದ್ದೀರಿ. ಇದರ ದಾಖಲೆಗಳನ್ನು ಕೊಡುತ್ತೇವೆ. ಸಿರಿಯಲ್ ನಂಬರ್ 96ರಲ್ಲಿ ಸರ್ವೇ ನಂಬರ್ 1029 ಇದ್ದರೆ ನಾವು ಹೋರಾಟ ಕೈ ಬಿಡುತ್ತೇವೆ ಎಂದರು
ಮುಸ್ಲಿಂ ಖಬ್ರಸ್ಥಾನ ಕಮಿಟಿ ಸಿಂದಗಿ ಎಂದು ಹೇಳಿ ಕೊಟ್ಟಿರುವ ಸ್ವಯಂ ಘೋಷಣಾ ಪತ್ರದಲ್ಲಿ ಈ ಕಮಿಟಿ ಆಡಳಿತ ಮಂಡಳಿಯ ಸದಸ್ಯರ ಪೈಕಿ ಯಾರ ಮೇಲೆ ಅಪರಾಧ ಪ್ರಕರಣಗಳಿಲ್ಲ. ವಕ್ಸ್ ಸಂಸ್ಥೆಯ ಬಾಡಿಗೆದಾರರಿಲ್ಲ ಕಬ್ಬಾದಾರರಿಲ್ಲ ಎಂದು ಹೇಳಿದ್ದಾರೆ. ನಿಮ್ಮ ಸದಸ್ಯರ ಮೇಲೆ ಅಪಾರಧ ಪ್ರಕರಣಗಳು ಇರುವ ಎಫ್‌ಐಆ ದಾಖಲೆಗಳನ್ನು ನಾವು ಕೊಡುತ್ತೇವೆ. ನಿಮಗೆ ಧಮ್ಮು, ತಾಕತ್ತು ಇದ್ದರೆ ನೀವು ಜನರಿಗೆ ಏನು ಹೇಳಲು ಹೊರಟಿದ್ದೀರಿ ಅದನ್ನು ಸತ್ಯ ಎನ್ನುವುದು ಸಾಬೀತು ಪಡಿಸಿ ಎಂದು ದಸ್ತಗೀರ ಮುಲ್ಲಾ ಅವರು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ರಹಿಮ ದುದ್ದನಿ ಮಾತನಾಡಿ ತಮ್ಮ ವಿರುದ್ದ ಕೇಳಿ ಬಂದಿರುವ ರೂ 3ಲಕ್ಷ ವಸೂಲಿ ಅಲ್ಲಗಳೇದರು. ಇದು ಸತ್ಯಕ್ಕೆ ದೂರವಾದದ್ದು ಇದನ್ನು ಸಾಬೀತು ಪಡಿಸಬೇಕು ಇಲ್ಲದಿದ್ದರೆ ಅವರಿಗೆ ನೋಟೀಸ ಕಳಿಸುತ್ತೇನೆ ಎಂದರು.
ಮಹಿಬೂಬ ಸಿಂದಗಿಕರ ಮಾತನಾಡಿ ಸಿಂದಗಿಯಲ್ಲಿನ ಮುಸ್ಲೀಂ ಸಮೂದಾಯದ ಗಮನಕ್ಕೆ ತರದೇ ಕಳ್ಳತನದಿಂದ ಕಮೀಟಿ ಕೆಲ 11 ಜನರು ಖಬ್ರಸ್ಥಾನ ಕಮಿಟಿ ಮಾಡಿಕೊಂಡು ಬಂದಿದ್ದು ಯಾಕೆ ಅನ್ನೋದು ಹೇಳಬೇಕು ಎಂದು ಪ್ರಶ್ನಿಸಿದರು.
ಈ ವೇಳೆ ಸಮಿತಿ ಉಪಾಧ್ಯಕ್ಷ ಯಾಕೂಬ ನಾಟೀಕಾರ ಅಬ್ದುಲರಜಾಕ ದುದ್ದನಿ ತಾಲೀಬ ಗುಂದಗಿ ಅಬ್ದುಲ್ ರಜಾಕ ದುದನಿ ಜಾಫರ್ ಇನಾಮದಾರ ಮಹಿಬೂಬ ಹಸರಗುಂಡಗಿ ಅಸ್ಪಾಕ ಕರ್ಜಗಿ, ಸೇರಿದಂತೆ ಅನೇಕರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 