ಜ.1 ರಂದು ಹಜರತ್ ಬಡೇಸಾಹೇಬ್ ಉರುಸು ಜಿಯಾರತ್ ಪಲ್ಲಕ್ಕಿ ಉತ್ಸವ
Hazrat Badesaheb Urs Ziarat Palanki Festival on January 1st
ಕಂಪ್ಲಿ:27 ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಹಜರತ್ ಬಡೇ ಸಾಹೇಬ್ ದರ್ಗಾದಲ್ಲಿ ಮೂರು ದಿನ ನಡೆಯುವ 238ನೇ ಗಂಧ ಮತ್ತು ಉರುಸ್ ಹಿನ್ನಲೆ ಧರ್ಮಗುರುಗಳಾದ ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಸೈಯದ್ ಷಾ ಅಬ್ದುಲ್ ಖಾದರ್ ಖಾದ್ರಿ, ಸೈಯದ್ ಷಾ ಮೆಹಮೂದ್ ಖಾದ್ರಿ, ಸೈಯದ್ ಷಾ ಹುಸೇನ್ ಪೀರ ಖಾದ್ರಿ, ಸೈಯದ್ ಷಾ ಗೇಸುದರಾಜ್ ಖಾದ್ರಿ, ಸೈಯದ್ ಅಬ್ದುಲ್ ಖಾದರ್ ಖಾದ್ರಿ, ಸೈಯದ್ ಷಾ ಅಬುತುರಾಬ್ ಖಾದ್ರಿ, ಸೈಯದ್ ಶಮ್ ಸುದ್ದೀನ್ ಖಾದ್ರಿ ಇವರ ದಿವ್ಯ ಸಾನಿಧ್ಯದಲ್ಲಿ ಕ್ಯಾಲೆಂಡರ್ ಮತ್ತು ಉರುಸ್ ಭಿತ್ತಿ ಪತ್ರಗಳನ್ನು ಶುಕ್ರವಾರ ಬಿಡುಗಡೆ ಮಾಡಿದರು.
ನಂತರ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಮೂರು ದಿನಗಳ ಕಾಲ ಹಜರತ್ ಬಡೇಸಾಬ್ ದರ್ಗಾದಲ್ಲಿ ಗಂಧ, ಉರುಸ್, ಜಿಯಾರತ್ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಇದೇ ಡಿಸೆಂಬರ್ 31ರಂದು ಗಂಧ, 2026ರ ಜನವರಿ 1ರಂದು ಉರುಸ್ ಹಾಗೂ 2ರಂದು ಜಿಯಾರತ್ ಮತ್ತು ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಆದ್ದರಿಂದ ಸರ್ವ ಧರ್ಮಿಯರು ಆಗಮಿಸಿ ಯಶಸ್ವಿಗೊಳಿಸಬೇಕು. ಭಕ್ತರಿಗಾಗಿ ಅನ್ನಸಂತಾರೆ್ಣ ವ್ಯವಸ್ಥೆ ಮಾಡಲಾಗಿದೆ. ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಹಾಜಿ ಕರೀಂಸಾಬ್, ಕೆ.ಮೆಹಬೂಬ್, ಯು.ಜಿಲಾನ್, ಯು.ಜಹಿರುದ್ಧೀನ್, ಬಡಿಗೇರ ಅಜೀಜ್ ಸಾಬ್, ಮುದುಗಲ್ ರೋಷನ್, ಗೆಜ್ಜಳ್ಳಿ ಭಾಷಾ, ಬಡಿಗೇರ ಜಿಲಾನಸಾಬ್, ಹೊನ್ನೂರವಲಿ ಸೇರಿದಂತೆ ಮುಸ್ಲಿಂ ಬಾಂಧವರು ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 