ಹತ್ತರಗಿ : ರಸ್ತೆ ಕಾಮಗಾರಿಗೆ ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಪೂಜೆ
Hataragi: MP Priyanka Jarkiholi performs puja for road work
ಉಳ್ಳಾಗಡ್ಡಿ-ಖಾನಾಪೂರ 29: ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಇಂದಿರಾನಗರ ಗ್ರಾಮದಲ್ಲಿ ಮಂಗಳವಾರ ದಿ 28 ರಂದು ಲೋಕೋಪಯೋಗಿ ಇಲಾಖೆಯ ಜಿಲ್ಲಾ ಮತ್ತು ಇತರ ರಸ್ತೆಗಳ ಸುಧಾರಣೆ ಯೋಜನೆ ಅಡಿಯಲ್ಲಿ ಮಂಜೂರಾದ 4 ಕೋಟಿ ರೂ .ಗಳ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಂ 4 ರಿಂದ ಇಂದಿರಾನಗರ ಹಾಗೂ ನಾಗನೂರ ಕೆ.ಎಂ ವರೆಗೆ ಕೊಡು ರಸ್ತೆ ಖಡೀಕರಣ ಹಾಗೂ ಡಾಂಬರೀಕರಣ ಸಿ.ಡಿ ನಿರ್ಮಾಣ ಕಾಮಗಾರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ ನೀಡಿದರು,
ಇದೇ ಸಂದಭ್ದಲ್ಲಿ 150 ಲಕ್ಷ ರೂ ಗಳ ವೆಚ್ಚದಲ್ಲಿ ಹಳೆ ವಂಟಮುರಿ ಕೂಡುವ ಯಮಕನಮರಡಿ ದಾದಬಾನಹಟ್ಟಿ ಇಂದಿರಾನಗರದಿಂದ ತೆರಣಿ ಮಹಾರಾಷ್ಟ್ರ ಗಡಿಯವರಿಗೆ ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಕಾಮಗಾರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಯುವಧುರಿಣ ರವೀಂದ್ರ ಜಿಂಡ್ರಾಳಿ, ಹತ್ತರಗಿ ಗ್ರಾಮ ಅಧ್ಯಕ್ಷ ಸಮೀರ ಬೇಪಾರಿ, ಮಾಜಿ ಅಧ್ಯಕ್ಷ ಮಹಾದೇವ ಪಟೋಳಿ, ಬಸವರಾಜ ಕೆಸೂರ, ಹಿರಿಯ ಕಾಂಗ್ರೆಸ್ ಮುಖಂಡರಾದ ಹನುಮಂತ ಗಾಡೀವಡ್ಡರ, ಪಾಂಡು ಗಾಡಿವಡ್ಡರ, ಶ್ರೀಶೈಲ ಸಾರಪುರೆ, ಮಲ್ಲೇಶ ಕಾಂಬಳೆ, ಸಂತೋಷ ನಾಯಕ, ಲಕ್ಷ-್ಮಣ ಹೊಳಿದೋಳಿ, ರವಿ ಘಸ್ತಿ, ಗಣಪತಿ ಘಸ್ತಿ, ಲಗಾಮಾ ಜಿಂಡ್ರಾಳಿ, ಮಂಜು ಗೊಂದಳಿ, ಆನಂದ ಹುಕ್ಕೇರಿ, ಲಗಮವ್ವ ಹುಗಾಯಿ, ಮೀನಾಕ್ಷಿ ದೊಳಿ, ಹಾಗೂ ಗ್ರಾಮಸ್ಥರು ಪಿಡಬ್ಲೂಡಿ ಸ.ಕಾ.ನಿ ಅಭಿಯಂತ ಪ್ರವೀಣ ಮಾಡ್ಯಾಳ, ಸಹಾಯಕ ಅಭಿಯಂತ ಸಂದೀಪ ಬಿ.ಆರ್, ಪ್ರಥಮ ದರ್ಜೆ ಗುತ್ತಿಗೆದಾರ ಎಸ್ ಬಿ ಸುತ್ತಗಟ್ಟಿ ಇತರರು ಉಪಸ್ಥಿತರಿದ್ದರು,
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 