ಹರಿಯಾಣ; ಅಪ್ರಾಪ್ತನ ಮೇಲೆಅತ್ಯಾಚಾರ, ಮಹಿಳೆ ವಿರುದ್ದ ಪೊಲೀಸರ ಪ್ರಕರಣ

ಚಂಡೀಗಢ, ಜ ೧೪: ಅಪ್ರಾಪ್ತ ಬಾಲಕನ  ಮೇಲೆ  ಅತ್ಯಾಚಾರ ನಡೆಸಿದ ಆರೋಪ ಸಂಬಂಧ   ಮಹಿಳೆಯೊಬ್ಬಳ  ವಿರುದ್ದ ಹರಿಯಾಣದ  ಪಾಲ್ವಾ ಜಿಲ್ಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಬಾಲಕನೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ೨೯ ವರ್ಷದ ಮಹಿಳೆಯೊಬ್ಬಳು ಪಾಲ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.  ಪೊಲೀಸರು  ಬಾಲಕನ್ನು  ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.  ಆದರೆ,  ಆತ  ೧೪ ವರ್ಷದ ಅಪ್ರಾಪ್ತ ನಾಗಿರುವ ಕಾರಣ  ಹುಡುಗನನ್ನು  ಬಿಡುಗಡೆಗೊಳಿಸುವಂತೆ  ನ್ಯಾಯಾಲಯ ಪೊಲೀಸರಿಗೆ ಸೂಚಿಸಿತು. ಆದರೆ, ಅತ್ಯಾಚಾರದ ದೂರು ದಾಖಲಿಸಿದ್ದ ಮಹಿಳೆಯ ಮೇಲೆ  ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ  ಎಸಗಿರುವ  ಪ್ರಕರಣ ದಾಖಲಿಸಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. 

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಹಿಳೆಯೊಬ್ಬಳು ಬಾಲಕನ ಮೇಲೆ ಅತ್ಯಾಚಾರ ಎಸಗಿದ್ದ  ದೂರು  ದಾಖಲಿಸಿದ್ದಳು. ದೂರಿನ ಸಂಬಂಧ   ತನಿಖೆ  ಆರಂಭಿಸಿ   ಬಾಲಕನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು  ಎಂದು  ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಅಂಜುದೇವಿ ತಿಳಿಸಿದ್ದಾರೆ. ಆದರೆ,  ಬಾಲಕ ಅಪ್ರಾಪ್ತ ನಾದ   ಕಾರಣ,   ಆತನನ್ನು  ಬಿಡುಗಡೆಗೊಳಿಸಿ,   ಮಹಿಳೆ ವಿರುದ್ಧವೇ  ಅತ್ಯಾಚಾರ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಅಂಜುದೇವಿ ಹೇಳಿದ್ದಾರೆ.