ಸಂಕ್ರಾಂತಿ ಸಂಭ್ರಮದ ಪ್ರಯುಕ್ತ ವೈ.ಜೆ.ಆರ್‌. ಕಾಲೇಜಿನಲ್ಲಿ ಸುಗ್ಗಿ ಸಂಭ್ರಮ

ಸಂಕ್ರಾಂತಿ ಸಂಭ್ರಮದ ಪ್ರಯುಕ್ತ  ವೈ.ಜೆ.ಆರ್‌. ಕಾಲೇಜಿನಲ್ಲಿ ಸುಗ್ಗಿ ಸಂಭ್ರಮ   Harvest festival at Y.J.R. College on the occasion of Sankranti celebrations

           ಗಂಗಾವತಿ  13: ವಿದ್ಯಾನಗರದ ಶಾರದಾ ವಿದ್ಯಾ ಸಂಸ್ಥೆಯ ವೈ.ಜೆ.ಆರಿ​‍್ಪಯುಸಿ ಕಾಲೇಜಿನ ಮಕರ ಸಂಕ್ರಮಣ ಸಂಸ್ಕೃತಿ ವೈಭವ 2026 ಕಾರ್ಯಕ್ರಮವನ್ನು ರಾಜವಂಶಸ್ಥೆ ಲಲಿತರಾಣಿ ಶ್ರೀರಂಗದೇವರಾಯಲು ಉದ್ಘಾಟಿಸಿ  ಮಾತನಾಡಿದರು.‘ಆಧುನಿಕತೆ ಭರಾಟೆಯಲ್ಲಿ ಗ್ರಾಮೀಣ ಭಾಗದಲ್ಲೂ ಸಂಸ್ಕೃತಿ, ಆಚರಣೆಗಳು ಕಣ್ಮರೆಯಾಗುತ್ತಿವೆ. ನಮ್ಮ ಹಬ್ಬದ ಆಚರಣೆಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಅಗತ್ಯವಿದೆ.ವಿದ್ಯಾರ್ಥಿಗಳು ಉತ್ತಮ್ ಸ್ಥಾನ ಮಾನಕ್ಕೆ ಹೋದ ನಂತರ ಕಲಿತ ಶಾಲೆ, ಕಾಲೇಜು ಗಳನ್ನು ಮರೆ ಯದೇ ಇತರೆ ಮಕ್ಕಳ ಶೈಕ್ಷಣಿಕ ಏಳೆಗಾಗಿ ಕೊಡುಗೆ ನೀಡಬೇಕೆಂದರು.

            ಜಾನಕಿ ರಾಮ್ ಕಲ್ಯಾಣಂ ಮಾತನಾಡಿ ವಿದ್ಯಾರ್ಥಿಗಳು ಪರಿಶ್ರಮ ಪಟ್ಟರೆ ಉತ್ತಮ ಫಲಿತಾಂಶ ಖಚಿತ. ಜೀವನದ ನೂತನ ದಿಕ್ಕಿನಲ್ಲಿ ಯೋಚಿಸುವ ಸಂದರ್ಭವಾಗಿದ್ದು ವಿಶೇಷವಾಗಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಪರಿಶ್ರಮ ಪಟ್ಟು ಓದುವ ಮೂಲಕ ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಮತ್ತು ಪಾಲಕರಿಗೆ ಕೀರ್ತಿ ತರಬೇಕೆಂದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಪ್ರತಿ ವರ್ಷ ವಿದ್ಯಾರ್ಥಿಗಳ ವಿಕಸನನಕ್ಕೆ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಾ ಬರುತ್ತದೆ ಎಂದರು.ಭೋಗಿ ಆಚರಣೆ ಹಿನ್ನೆಲೆಯ ಕಾಲೇಜು  ಆವರಣದಲ್ಲಿ ಬೆರಳಣಿಗಳನ್ನು ಸುಡುವ ಮೂಲಕ ಹಾಲು ಉಕ್ಕಿಸಿ, ಹಬ್ಬವನ್ನು ಆಚರಿಸಲಾಯಿತು.

             ಕಾಲೇಜು ಉಪನ್ಯಾಸಕರು , ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ನೂತನ ವಸ್ತ್ರಗಳನ್ನು ಧರಿಸಿ, ಗಮನ ಸೆಳೆದರು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಅಧ್ಯಕ್ಷ ಸಂಕ್ರಾತ್ರಿ ಪ್ರಸಾದಆಡಳಿತ ಮಂಡಳಿಯ ನಿರ್ದೇಶಕರಾದ ರವಿಕುಮಾರ ಗೊಟ್ಟಿ ಪಾಟಿ, ಎಂ.ಸತ್ಯನಾರಾಯಣ,ರೆಡ್ಡಿ ಶ್ರೀನಿವಾಸ ಮಾತನಾಡಿದರು. ಶಾರದಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಆರ್‌. ರಾಜಶೇಖರ, ಗೌರವಾಧ್ಯಕ್ಷ ಟಿ.ವಿ.ಸತ್ಯನಾರಾಯಣ, ಎಂ.ಸತ್ಯ ನಾರಾಯಣ, ಸುಬ್ಬರಾವ್, ಕಮ್ಮಾ ಕೋಟೇಶ್ವರ, ಎಸ್‌.ವೆಂಕಟೇಶ ರಾವ್, ಕೆ.ಬಿ.ಜಿ.ಕೆ ರೆಡ್ಡಿ, ವಿಶ್ವನಾಥ ರಾಜು,ಕಾಂತರಾವ್, ವಿಷ್ಣು ಜೋಷಿ ಪ್ರಾಚಾರ್ಯ ಬಿ.ಕೋಟೇಶ್ವರರಾವ್ ಸೇರಿದಂತೆ ಅನೇಕರಿದ್ದರು.