ಹಾರೂಗೇರಿ ಸುದ್ದಿ-2 ಕುಡಚಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಶಾಸಕ ತಮ್ಮಣ್ಣವರ ಚಾಲನೆ

Harugeri News-2 MLA Tammanna's drive for the development of roads in Kudachi Constituency

ಹಾರೂಗೇರಿ ಸುದ್ದಿ-2 ಕುಡಚಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಶಾಸಕ ತಮ್ಮಣ್ಣವರ ಚಾಲನೆ 

ಹಾರೂಗೇರಿ : ಕುಡಚಿ ಮತಕ್ಷೇತ್ರದ ಪ್ರತಿಯೊಂದು ರಸ್ತೆಗಳನ್ನು ಅಭಿವೃದ್ಧಿ ಪಡಿಸಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. 

   ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕುಡಚಿ ವಿಧಾನಸಭಾ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಗುದ್ದಲಿ ಪೂಜೆ ನೇರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

   ಕ್ಷೇತ್ರದ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ವಿಶೇಷ ಮನವಿ ಮಾಡಲಾಗಿದ್ದು, ಕ್ಷೇತ್ರದ ಹಾಳಾದ ರಸ್ತೆಗಳ ಅಭಿವೃದ್ಧಿ ಮತ್ತು ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಅದರಂತೆ ಕ್ಷೇತ್ರದ ಅಭಿವೃದ್ಧಿಗೆ ಹಂತಹಂತವಾಗಿ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬಂದು ಕ್ಷೇತ್ರದ ಜನರ ಆಶಯಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

  ಜತ್‌-ಜಾಂಬೋಟಿ ರಾಜ್ಯ ಹೆದ್ದಾರಿ ಹಿ 31ರ ಕಿಮೀ ನಂ 49.35 ರಿಂದ 62ರವರೆಗೆ 6 ಕೋಟಿ ವೆಚ್ಚದ ಮರು ಡಾಂಬರೀಕರಣ, 2ಕೋಟಿ ವೆಚ್ಚದಲ್ಲಿ ರಾಯಬಾಗ ತಾಲೂಕಿನ ಚಿಕ್ಕೋಡಿ ರೇಲ್ವೆ ಸೇಷನ್ ಸಂಪರ್ಕಿಸುವ ಮುಗಳಖೋಡ ಹಂದಿಗುಂದ ರಸ್ತೆ ಸುಧಾರಣೆ, 63.53 ಲಕ್ಷದಲ್ಲಿ ಸವಸುದ್ದಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಹೆಚ್ಚುವರಿ 4 ಶಾಲಾ ಕೊಠಡಿಗಳ ನಿರ್ಮಾಣ, ಇಟನಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ಲಕ್ಷ ವೆಚ್ಚದಲ್ಲಿ ರಂಗಮಂಟಪ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು. 

 ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಮುಖ್ಯಾಧಿಕಾರಿ ಅಭಿಷೇಕ ಪಾಂಡೆ, ಸದಸ್ಯರಾದ ಬಸವರಾಜ ಚೌಗಲಾ, ಆನಂದಗೌಡ ಪಾಟೀಲ, ಮಾಳಪ್ಪ ಹಾಡಕಾರ, ವರ್ಧಮಾನ ಶಿರಹಟ್ಟಿ, ಕಲ್ಮೇಶ ಕಾಂಬಳೆ, ಮಹೇಶ ಐಹೊಳೆ, ವಿನಾಯಕ ಪೋಳ, ಬುರಾನಸಾಬ ಶೇಖ, ಬಾಳೇಶ ಹಾಡಕಾರ ಮತ್ತೀತರರು ಉಪಸ್ಥಿತರಿದ್ದರು. 

ಫೋಟೋ ಶಿರ್ಷಿಕೆ : 19ಹಾರೂಗೇರಿ ಸುದ್ದಿ-2 -  ಹಾರೂಗೇರಿ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕುಡಚಿ ವಿಧಾನಸಭಾ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಗುದ್ದಲಿ ಪೂಜೆ ನೇರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.