ಕಷ್ಟಗಳು ಸುಖಾಗಮನದ ಹೆಗ್ಗುರುತು: ಡಾ. ಅಭಿನವ ಬ್ರಹ್ಮಾನಂದ

ಲೋಕದರ್ಶನ ವರದಿ

ಮೋಳೆ:  ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಕಷ್ಟವನ್ನು ಯಾರೂ ಬಯಸುವುದಿಲ್ಲ. ಸುಖ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೇ ಸಮತೋಲನ ಸ್ಥಿತಿಯಲ್ಲಿ ಬದುಕಿ ಬಾಳುವುದೇ ಮನುಷ್ಯನ ಗುರಿಯಾಗಿರಬೇಕು. ಕಷ್ಟಗಳು ಸುಖಾಗಮನದ ಹೆಗ್ಗುರುತು ಎಂಬುದನ್ನು ಯಾರೂ ಮರೆಯಬಾರದೆಂದು ಪರಮಾನಂದವಾಡಿಯ ಗುರುದೇಬ ಬ್ರಹ್ಮಾನಂದ ಆಶ್ರಮದ ಶ್ರೀ ಡಾ. ಅಭಿನವ ನುಡಿದರು.

ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 100 ವರ್ಷಗಳನ್ನು ಪೂರೈಸಿದ್ದು, ರೂ. 60 ಲಕ್ಷಗಳ ವೆಚ್ಚದಲ್ಲಿ ನಿಮರ್ಿಸಿರುವ ಶತಮಾನೋತ್ಸವದ ಭವ್ಯ ಕಟ್ಟಡದ ಉದ್ಘಾಟನೆಯಲ್ಲಿ ಪಾಲ್ಗೊಂಡು  ನುಡಿದರು.

ಸುಖ ದುಖ; ಹಗಲು ರಾತ್ರಿ ಇದ್ದಂತೆ. ಶಾಶ್ವತವಾಗಿ ಸುಖ ಮತ್ತು ದುಖ:ಇರುವದಿಲ್ಲ. ಇವು ನಿರಂತರ ಸುತ್ತುತ್ತಲೇ ಇರುತ್ತವೆ. ಅಧಿಕಾರ, ಸಂಪತ್ತು, ಸಿಕ್ಕಿತ್ತೆಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಕೆಲವು ಸಂದರ್ಭದಲ್ಲಿ ಧರ್ಮ ದೇವರುಗಳನ್ನು ಮತ್ತು ಗುರುಗಳನ್ನು ಮರೆಯುತ್ತಾರೆ. ಆದರೆ ಜುಗೂಳ ಪಿಕೆಪಿಎಸ್ ಸಂಸ್ಥೆಯವರು 100 ವರ್ಷ ಗತಿಸಿದ ಸಂಸ್ಥೆಗೆ ಗುರುಗಳನ್ನು ಕರೆಯಿಸಿ ಹೋಮ ಹವನ ಮಾಡಿಸುವ ಮೂಲಕ ಸಂಸ್ಕಾರ,ಸಂಸ್ಕೃತಿಯನ್ನು ಎತ್ತಿ ಹಿಡಿದ್ದಾರೆ. ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಆಶೀರ್ವದಿಸಿದರು. . 

ಸಾನಿದ್ಯವನ್ನು ವಿಜಯಪೂರ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಶ್ರೀ ಪ್ರಜ್ಞಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಅಣ್ಣಾಸಾಬ ಪಾಟೀಲ, ಉಪಾಧ್ಯಕ್ಷ ಬಾಬುಗೌಡಾ ಪಾಟೀಲ, ಜಿ.ಪಂ. ಮಾಜಿ ಸದಸ್ಯ ಪೋಪಟ ಪಾಟೀಲ, ಸಂಘದ ಎಲ್ಲ ಸದಸ್ಯರು, ಸಿಬ್ಬಂದಿ ವರ್ಗದವರು, ಜುಗೂಳ, ಶಹಾಪೂರ ಗ್ರಾಮಸ್ಥರು ಉಪಸ್ಥಿತರಿದ್ದರು.