ಹರ್ ಘರ್ ತಿರಂಗಾ ಅಭಿಯಾನ-2025 ಕ್ಕೆ ಚಾಲನೆ

ಹರ್ ಘರ್ ತಿರಂಗಾ ಅಭಿಯಾನ-2025 ಕ್ಕೆ ಚಾಲನೆ  Har Ghar Tiranga Campaign-2025 launched

ವಿಜಯಪುರ 14: ನಗರದ  ಬಿಎಲ್ಡಿಇ ಸಂಸ್ಥೆಯ ಎಸ್ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಜಯಪುರ, ಎನ್‌ಎಸ್‌ಎಸ್ ಘಟಕ-1 ಮತ್ತು ಘಟಕ-2 ಸಹಯೋಗದಲ್ಲಿ ಗುರುವಾರ ದಿನಾಂಕ 14-08-2025 ರಂದು ರ್ಯಾಲಿಯನ್ನು ಹಮ್ಮಿಕೊಂಡು ಮನೆಮನೆಗೆ ಎನ್‌ಎಸ್‌ಎಸ್ ಸ್ವಯಂಸೇವಕರು ಈ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿ, ನಮ್ಮ ರಾಷ್ಟ್ರದ ಬಗ್ಗೆ ದೇಶಭಕ್ತಿಯ ಭಾವನೆಗಳನ್ನು ಬೆಳೆಸಲು ಮತ್ತು ಹರ್ ಘರ್ ತಿರಂಗ ಹಾರಿಸುವ ಆಚರಣೆಯನ್ನು ಉತ್ತೇಜಿಸಲು ಭಾರತ ಮಾತಾ ಕಿ ಜೈ ,ಒಂದೇ ಮಾತರಂ ಎಂದು ಘೋಷಣೆಗಳನ್ನು ಕೂಗಿ ರಾಷ್ಟ್ರಭಕ್ತಿಯನ್ನು ಮೂಡಿಸಿ  ಮತ್ತು ಪ್ರತಿ ಮನೆಗೆ ರಾಷ್ಟ್ರಧ್ವಜವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಅರ್‌.ಎಂ.ಮಿರ್ಧೆ,ಉಪಪ್ರಾಚಾರ್ಯ ಡಾ.ಅನೀಲ.ಭೀ.ನಾಯಕ,ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್ ಪಾಟೀಲ,ವಿಜಯಪುರ ಜಿಲ್ಲಾ ಉಸ್ತುವಾರಿ ಸಂಯೋಜಕರಾದ ಶ್ರೀ. ಗಂಗಾಧರ್ ಅಗಸರ್,ಎನ್ ಎಸ್ ಎಸ್ ಘಟಕ 1 ್ಘ 2 ರ ಅಧಿಕಾರಿಗಳಾದ ಡಾ.ತರನ್ನುಮ್ ಜಬೀನ್ ಖಾನ್,ಡಾ.ಮಿಲನ್ ರಾಠೋಡ್,ದೈಹಿಕ ನಿರ್ದೇಶಕರಾದ ಎಸ್ ಕೆ ಪಾಟೀಲ,ಎನ್ ಎಸ್ ಎಸ್ ಸ್ವಯಂ ಸೇವಕ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು