ಪ್ರೇಮಿಗಳ ದಿನಾಚರಣೆಗೆ 'ಸಾಗುತ ದೂರದೂರ'

ಬೆಂಗಳೂರು, ಜ 30, ದಿವ್ಯ ಪೂಜಾರಿ ಅರ್ಪಿಸುವ, ಖುಷಿ ಕನಸು ಕ್ರಿಯೇಷನ್ಸ್ ಲಾಂಛನದಲ್ಲಿ ಅಮಿತ್ ಪೂಜಾರಿ ಅವರು ನಿರ್ಮಿಸಿರುವ ‘ಸಾಗುತ ದೂರದೂರ‘ ಚಿತ್ರ ಫ಼ೆಬ್ರವರಿ ೧೪ರ ಪ್ರೇಮಿಗಳ ದಿನಾಚರಣೆಗೆ ತೆರೆಗೆ ಬರಲಿದೆಅನಿಲ್ ಪೂಜಾರಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದು, ರವಿತೇಜ ಆಕ್ಷನ್ ಕಟ್ ಹೇಳಿದ್ದಾರೆ  ಕದ್ರಿ ಮಣಿಕಾಂತ್ ಅವರ ಸಂಗೀತ ನಿರ್ದೇಶನವಿದ್ದು, ಸತೀಶ್ ಬಾಬು, ಡಾ ವಿ ನಾಗೇಂದ್ರಪ್ರಸಾದ್, ಸಂತೋಷ್ ನಾಯಕ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಅಭಿಲಾಶ್ ಕಲಾತಿ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.  ಖ್ಯಾತ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪವನ್ ಒಡೆಯರ್, ಮಹೇಶ್ ಸಿದ್ದು, ಆಶಿಕ್ ಆರ್ಯ, ಕುಮಾರ್ ನವೀನ್, ಗಡ್ದಪ್ಪ, ಸೂರಜ್, ಉಷಾ ಭಂಡಾರಿ, ಮೋಹನ್ ಜುನೇಜ, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.