ಭುಯ್ಯಾರ ಗ್ರಾಮದಲ್ಲಿ ಎಪ್ರೀಲ್ 1 ರಂದು ಹನುಮ ಜಯಂತಿ

ಭುಯ್ಯಾರ ಗ್ರಾಮದಲ್ಲಿ ಎಪ್ರೀಲ್ 1 ರಂದು ಹನುಮ ಜಯಂತಿ Hanuman Jayanti on April 1st in Bhuyyar village

ಲೋಕದರ್ಶನ ವರದಿ 

ವಿಜಯಪುರ 28: ಆದ್ಯರ ಕುಲಗುರು ಶ್ರೀ ಕೃಷ್ಣದ್ವಯಪಾಯನಾಚಾರ್ಯರು ಪ್ರತಿಷ್ಠಾಪಿಸಿದ ಇಂಡಿ ತಾಲೂಕಿನ ಭುಯ್ಯಾರ ಗ್ರಾಮದ ಶ್ರೀ ಹನುಮಂತ ದೇವರ ಜನ್ಮ ದಿನೋತ್ಸವವನ್ನು ಇದೇ ಎಪ್ರೀಲ್ 1 ರಂದು ಆಚರಿಸಲು ಗ್ರಾಮದ ಬ್ರಾಹ್ಮಣ ವೃಂದ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು  ಪ್ರಕಟಣೆಯಲ್ಲಿ ತಿಳಿಸಿದೆ. 

ಎರಡುನೂರಾ ಐವತ್ತು ವರ್ಷಗಳ ಹಿಂದೆ ಶ್ರೀ ಕೃಷಶಿದ್ವಯಪಾಯನಾಚಾರ್ಯರು ಪ್ರತಿಷ್ಠಾಪಿಸಿದ್ದಾರೆಂದು ಹೇಳಲಾಗುತ್ತಿರುವ ಈ ಭವ್ಯ ಹನುಮನ ಮೂರ್ತಿಯೂ ಸುಂದರವಾಗಿದ್ದು, ಇದರ ಮುಂದುಗಡೆ ಆದ್ಯರು ಶ್ರೀ ಕೃಷಶಿದ್ವಯಪಾಯನಾಚಾರ್ಯರ ಮೂರ್ತಿಯನ್ನು ಇತ್ತೀಚೆಗೆ ಸ್ಥಾಪಿಸಿ ಮತ್ತೋಂದು ಕಳೆ ಬರುವಂತೆ ಮಾಡಿದ್ದಾರೆ. 

ಎಪ್ರೀಲ 1 ರಂದು ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ತೊಟ್ಟಿಲೋತ್ಸವ, ವಾಯುಸ್ತುತಿ  ಪುನಶ್ಚರಣ, ಪವಮಾನ ಹೋಮ, ಪಂಚಾಮೃತ ಅಭಿಷೇಕ ಹಾಗೂ ವಿವಿಧ ಅಂಲಕಾರಗಳು ಮತ್ತು ಭಜನೆ ಕಾರ್ಯಕ್ರಮ ಜರುಗಲಿವೆ. ಭಕ್ತರು ವಿವಿಧ ಸೇವೆ ಸಲ್ಲಿಸಲು ಅವಕಾಶವಿದ್ದು, ಸರ್ವಸೇವೆ,  ಅನ್ನದಾನ ಸೇವೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಧು ಅಭಿಷೇಕ ಸೇವೆಗಳು  ಹಾಗೂ ಸಾಯಂಕಾಲ ದಾಸವಾಣಿ ನಡೆಯಲಿವೆ ಭಕ್ತಾಧಿಗಳು ತನು-ಮನ-ಧನದಿಂದ ಈ  ಎಲ್ಲ ಸೇವೆಗಳಲ್ಲಿ ಭಾಗವಹಿಸಿ ಶ್ರೀ ಹನುಮಂತ ದೇವರ ಜಯಂತಿಯನ್ನು ಯಶಸ್ವಿಗೊಳಿಸಬೇಕೆಂದು ಗ್ರಾಮದ ಬ್ರಾಹ್ಮಣ ವೃಂದ ಭಕ್ತರಲ್ಲಿ ಕೋರಿಕೆ  ಸಲ್ಲಿಸಿದೆ.  

ಭುಯ್ಯಾರ ಗ್ರಾಮದ ಸಂಜೀವ ಜಹಾಗೀರದಾರ, ಕೃಷ್ಟಾಚಾರ್ಯ ಜಹಾಗೀರದಾರ, ಗುರುಚಾರ್ಯ ಜಹಾಗೀರದಾರ, ಶ್ರೀನಿವಾಸ ಜಹಾಗೀರದಾರ, ಕೃಷ್ಣಾ ಆದ್ಯ, ಮುರಲೀಧರ ಜಹಾಗೀರದಾರ, ಮದುಸೂದನ ಆದ್ಯ, ಮನೋಜ ಆದ್ಯ, ಮಣ್ಣೂರಿನ ಸೇತುರಾಮಾರ್ಯ ಅವಧಾನಿ,  ಜಯತೀರ್ಥ ಮಾಹುಲಿ, ಹನುಮಂತರಾವ ಪಾಟೀಲ, ಗೀರೀಶ ಜಹಾಗೀರದಾರ,  ಭೀಮಸೇನ ಜಹಾಗೀರದಾರ, ಸುನೀಲ ಆದ್ಯ (ಕುಲಕರ್ಣಿ) ಜಗನ್ನಾಥ ಪಾಟೀಲ, ರಮೇಶ ಪಾಟೀಲ, ಪುರುಷೋತ್ತಮ ಮಾಹುಲಿ, ಕಲ್ಯಾಣರಾವ ಕುಲಕರ್ಣಿ, ಹಾಗೂ ಸಮಸ್ತ ಗ್ರಾಮದ ಮುಖಂಡರುಗಳಿಂದ ಶ್ರೀ ಹನುಮಂತ ದೇವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಿದ್ದಾರೆ. 

ಪಾಟೀಲ ಮನೆತನದ ಹನುಮಂತ ಜಯಂತಿ :  

ಇದೇ ಗ್ರಾಮದಲ್ಲಿ ಪಾಟೀಲ ಮನೆತನದವರು ನಿರ್ಮಿಸಿದ ಶ್ರೀ ಹನುಮಂತ ದೇವರ ಜಯಂತಿ ಆಚರಣೆಯನ್ನು ಹನುಮಂತರಾವ ಪಾಟೀಲ ಅವರ ನೇತೃತ್ವದಲ್ಲಿ ಜರುಗಲಿದೆ.