ಸಿಂದಗಿ ನಗರದ ಗಾಳಿ ಆಂಜನೆಯಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನೆರವೇರಿದ ಹನುಮಜಯಂತಿ

ಸಿಂದಗಿ ನಗರದ ಗಾಳಿ ಆಂಜನೆಯಸ್ವಾಮಿ ದೇವಸ್ಥಾನದಲ್ಲಿ  ವಿಜೃಂಭಣೆಯಿಂದ ನೆರವೇರಿದ ಹನುಮಜಯಂತಿ Hanuman Jayanti celebrated with grandeur at Gali Anjanayaswamy Temple in Sindagi City

ಲೋಕದರ್ಶನ ವರದಿ 

        ಸಿಂದಗಿ 03 : ಭಕ್ತರ ಕಷ್ಟಗಳನ್ನು ನಿವಾರಿಸುವ, ಬೇಡಿದವರಿಗೆ ವರವ ನೀಡುತ ಜಗತ್ತ ಉದ್ದಾರಕ ಸಿಂದಗಿ ನಗರದ ಗಾಳಿ ಆಂಜನೇಯ ಸ್ವಾಮಿ ಜಯಂತಿಯಲ್ಲಿ ಪಾಲ್ಗೊಂಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಬಿ.ಜೆ.ಪಿ ಮುಖಂಡರಾದ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ರವರು ಹೇಳಿದರು. 

ನಗರದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿರುವ ಗಾಳಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏರಿ​‍್ಡಸಿದ್ದ ಹನುಮ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಇವರು ಮಾತನಾಡಿದರು. ಮುಂದಿನ ದಿನಗಳಲ್ಲಿ ದೇವಸ್ಥಾನ ಜೀಣೋದ್ದಾರಕ್ಕೆ ನಾನು ಎಲ್ಲ ರೀತಿಯಲ್ಲಿ ಸಹಕರಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ದೇಸ್ಥಾನಕ್ಕೆ ಬೇಟಿ ನೀಡಿದ ಶ್ರೀ ಈರಯ್ಯಸ್ವಾಮಿಗಳು ಮೂರಜಾವದಮಠ ಇವರು ದೇವಸ್ಥಾನದ ಪೂಜೆ ಮತ್ತು ಭಕ್ತಾದಿಗಳೇ ಸ್ವಯಂ ಸೇವಕರಂತೆ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿ ತುಂಬು ಹೃದಯದಿಂದ ಹೊಗಳಿದರು. 

ದೇವಸ್ಥಾನದ ಅರ್ಚಕರಾದ ವಿಜಯಕುಮಾರ ಆಚಾರಿ ಇವರು ಮಾತನಾಡಿ ಹನುಮ ಜಯಂತಿ ಪ್ರಯುಕ್ತ ದೇವಸ್ಥಾನದಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ವೇದ ಬ್ರಹ್ಮ ಮಹಾಬಳೇಶ್ವಾರಾಚಾರ್ಯ ಮಠ ಶ್ರೀಗಳಿಂದ ಇಚ್ಚಾ ಪ್ರಾಪ್ತಿಗಾಗಿ ಮಹಾಗಣ ಹೋಮ ನೆರವೇರಿಸುವುದರೊಂದಿಗೆ ವಿಶೇಷ ಪೂಜೆ ನಡೆಸಲಾಗಿದೆ. ದೇವಸ್ಥಾನಕ್ಕೆ ಬಂದ ಭಕ್ತಾದಿಗಳು ಜಗದ್ದೋದ್ಧಾರಕ ಆಂಜನೆಯ ಸ್ವಾಮಿ ದರ್ಶನ ಪಡೆದು ಪ್ರಸಾದ ಸೇವಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.  

        ಇದೇ ಸಂದರ್ಭದಲ್ಲಿ ಸಿಂದಗಿ ನಗರದ ಗಣ್ಯವರ್ತಕರಾದ ರಾಜಶೇಖರ ಉಪ್ಪಿನ ಮತ್ತು ಅವರ ಶ್ರೀಮತಿಯವರು ಜಯಂತಿಗೆ ಬಂಧ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾದರು.  

ಇದೇ ಸಂದರ್ಭದಲ್ಲಿ ಹನುಮ ಜಯಂತಿಯಲ್ಲಿ ಶ್ರೀಪಾದ ಮಲ್ಲೇದ, ಬಸವರಾಜ ಶಿವಶಿಂಪಗೇರ, ಈರಣ್ಣ ಬಡಿಗೇರ, ರಾಮನಗೌಡ ಬಿರಾದಾರ, ಚನ್ನಪ್ಪಗೌಡ ಬಿರಾದಾರ, ಗುರ​‍್ಪ ಪತ್ತಾರ, ರುದ್ರಯ್ಯ ಹಿರೇಮಠ, ಸಂಗಮೇಶ ಕುಂಬಾರ, ಪ್ರಭುಲಿಂಗ ಕುಂಬಾರ, ಮತ್ತು ಎಪಿಎಮ್‌ಸಿ ಯೋಗಾ ಗ್ರೂಪಿನ ಎಲ್ಲಾ ಸದಸ್ಯರು ಸೇರಿದಂತೆ ಇನ್ನು ಅನೇಕರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಹನುಮ ಜಯಂತಿಯಲ್ಲಿ ಪಾಲ್ಗೊಂಡಿದ್ದರು.