ಹ್ಯಾಂಗ್ ಜೌ 2022ರ ಏಷ್ಯನ್ ಪ್ಯಾರಾ ಗೇಮ್ಸ್ ಮಸ್ಕಾಟ್ ಅನಾವರಣ

ಹ್ಯಾಂಗ್ ಜೌ, ಏ 16, 2022 ರಲ್ಲಿ ಹ್ಯಾಂಗ್‌ ಜೌನಲ್ಲಿ ನಡೆಯಲಿರುವ 4 ನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಮ್ಯಸ್ಕಾಟ್ ಅನ್ನು ಗುರುವಾರ ಅನಾವರಣಗೊಳಿಸಲಾಗಿದೆ,  "ಫೀಫೀ" ಯ ವಿನ್ಯಾಸವು ಲಿಯಾಂಗ್ ಜೌ ಸಂಸ್ಕೃತಿಯಲ್ಲಿನ "ಡಿವೈನ್ ಬರ್ಡ್" ನ ವಿಶಿಷ್ಟತೆಯಿಂದ ಪ್ರೇರಿತಗೊಂಡಿದೆ.ಮ್ಯಸ್ಕಾಟ್ ,  ಹ್ಯಾಂಗ್‌ ಜೌನ ಪರಂಪರೆಯ ಸಮ್ಮಿಲನ ಮತ್ತು ತಾಂತ್ರಿಕ ಆವಿಷ್ಕಾರದ ಚಾಲನೆಯಾಗಿದ್ದು, ಮಾನವರು ಮತ್ತು ಪ್ರಕೃತಿಯ ನಡುವೆ ಸಾಮರಸ್ಯದ ಸಹಬಾಳ್ವೆಯ ಹಂಬಲವನ್ನು ಹೊಂದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. "ಡಿವೈನ್ ಬರ್ಡ್" ಆನಂದವನ್ನು ತರುತ್ತದೆ. ಆದ್ದರಿಂದ, ಅವಳನ್ನು ಸಂತೋಷ ಮತ್ತು ಸಾಂಸ್ಕೃತಿಕ ಭಿನ್ನತೆಯ ಸಂದೇಶವಾಹಕವಾಗಿಯೂ ನೋಡಲಾಗುತ್ತದೆ.ಮೊದಲ "ಫೀ" ಎಂದರೆ ಹಕ್ಕಿಗಳು ಹಾರುವ, ಮಾನವ ಸಮಾಜದ ಒಳಗೊಳ್ಳುವಿಕೆ, ಗೌರವ ಮತ್ತು ಭ್ರಾತೃತ್ವವನ್ನು ಸೂಚಿಸುತ್ತದೆ. ಮತ್ತು ಎರಡನೆಯ "ಫೀ" ವಿಕಲಾಂಗತೆ ಹೊಂದಿರುವ ಕ್ರೀಡಾಪಟುಗಳ ಕನಸುಗಳನ್ನು ಅನುಸರಿಸುವ ಮತ್ತು ತಮ್ಮನ್ನು ಮೀರಿ ತಲುಪುವ ಮಾನಸಿಕ ಸ್ಥಿರತೆಯನ್ನು ಪ್ರತಿನಿಧಿಸುತ್ತದೆ.