ನಿರ್ಗಮಿತ ಅಧಿಕಾರಿ ರಾಮು ಜಿ. ಅಗ್ನಿ ಅವರಿಂದ ಅಧಿಕಾರ ಹಸ್ತಾಂತರ

ನಿರ್ಗಮಿತ ಅಧಿಕಾರಿ ರಾಮು ಜಿ. ಅಗ್ನಿ ಅವರಿಂದ ಅಧಿಕಾರ ಹಸ್ತಾಂತರ  Handing over of charge by outgoing officer Ramu G. Agni.

ಲೋಕದರ್ಶನ ವರದಿ 

  ಆಲಮೇಲ 04 : ತಾಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅನಿಲ್ ಕೆ. ಹಳ್ಳಿ ಅವರು ಅಧಿಕಾರ ಸ್ವೀಕರಿಸಿದರು.  ನಿರ್ಗಮಿತ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ. ಅಗ್ನಿ ಅವರು ನೂತನವಾಗಿ ಆಗಮಿಸಿದ ಅನಿಲ್ ಕೆ. ಹಳ್ಳಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.  

ಈ ಸಂದರ್ಭದಲ್ಲಿ ತಾಲೂಕು ಘಟಕದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಬ್ಬರೂ ಅಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾದ   ಸಾವಿತ್ರಿ ಗೌರೋಜಿ, ಎರಡು ತಾಲೂಕುಗಳ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗಣಕಯಂತ್ರ ಸಹಾಯಕರು, ಕರ ವಸೂಲಿಗಾರರು ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.  

ಇದೇ ವೇಳೆ ಗ್ರಾಮೀಣ ಅಭಿವೃದ್ಧಿ ಯೋಜನೆಯ ತಾಲೂಕು ಐಇಸಿ ಸಂಯೋಜಕರಾದ ಶ್ರೀ ಬಸವರಾಜ ಹುಣಸಗಿ, ತಾಂತ್ರಿಕ ಸಂಯೋಜಕ ಪುಂಡಲೀಕ ಬಿಸ್ಸೆ, ತಾಲೂಕು ಎಂ.ಐ.ಎಸ್ ಸಂಯೋಜಕರಾದ ಪೂಜಾ ಆಸಂಗಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.