ಕರಕುಶಲ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
Handicraft exhibition and awareness program launched
ಕೊಪ್ಪಳ 27: ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾ ಅವರಣದಲ್ಲಿ ಎನ್ ಹೆಚ್ ಡಿಪಿ ಯೋಜನೆಯಡಿಯಲ್ಲಿ ಸರ್ಕಾರದ ಅಭಿವೃದ್ಧಿ ಆಯುಕ್ತರ ಕರಕುಶಲ ಸೇವಾ ಕೇಂದ್ರ ಮಂಗಳೂರು ವತಿಯಿಂದ ಆಯೋಜಿಸಲಾಗಿದ್ದ ಕರಕುಶಲ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಜರುಗಿತು.
ಮೂರು ದಿನಗಳ ಕಾಲ ಜರುಗಿದ ಸದರಿ ಕಾರ್ಯಕ್ರಮಕ್ಕೆ ಕಾಲೇಜಿನ ಉಪ ಪ್ರಾಚಾರ್ಯರಾದ ಎಂಎ ಖಾಯ್ಯುಮ್ ರವರು ಚಾಲನೆ ನೀಡಿದರು, ಜವಳಿ ಸಚಿವಾಲಯದ ಅಭಿವೃದ್ದಿ ಆಯುಕ್ತರ ಕರಕುಶಲ ಕಚೇರಿಯ ಮಾರುಕಟ್ಟೆ ಬೆಂಬಲ ಯೋಜನೆ ಅಡಿಯಲ್ಲಿ ಭಾರತೀಯ ಕರಕುಶಲ ವಸ್ತುಗಳನ್ನು ಉತ್ತೇಜಿಸಲು ರಾಜ್ಯದ ವಿವಿಧ ಕರಕುಶಲ ವಸ್ತುಗಳ ಬಗ್ಗೆ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಘಟಕರು ವಿವರಿಸಿದರು. ನೀವೇ ಮಾಡಿ ಆಧಾರದ ಮೇಲೆ ಇದು ವಿದ್ಯಾರ್ಥಿಗಳಿಗೆ ಭಾರತದ ಕರಕುಶಲ ವಸ್ತುಗಳ ತಿಳುವಳಿಕೆಯನ್ನು ಬೆಳೆಸಿಕೊಳ್ಳಲು ಮತ್ತು ಅರಿವು ಮೂಡಿಸಲು ಇದು ಸಹಾಯಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಿನಲ್ ಚಾಯ್ಸ್ ನ ಆನಂದ ಚಿತ್ರಗಾರ, ಟೆರಾಕೋಟ ಜೆವೆಳರಿಸ್ ನ ರೇಣುಕಾ ಕ್ರಾಸ್ ಲೀಫ್ ರೀಡ್ ನ ಸಹನ ಲಂಬಾಣಿ ಕಸೂತಿ ಯ ಲಕ್ಷ್ಮೀಬಾಯಿ ಭಾಗವಹಿಸಿದ್ದರು, ಇದರಲ್ಲಿ ಫಾದರ್ಸಾಬ್ ರಾಜೇಶ್ವರಿ ಕೆಎಂ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 