ಹಂಪಿ ಉತ್ಸವ: ಮುಖ್ಯ ವೇದಿಕೆಗೆ ಎಂಪಿ ಪ್ರಕಾಶರ ಹೆಸರಿಡಲು ಹಾಗೂ ಹಂಪಿಯ ಬಗ್ಗೆ ಹಾಡು ಬಿಡುಗಡೆಗೆ ಒತ್ತಾಯ
Hampi Festival: Demand to name the main stage after MP Prakashar and release a song about Hampi
ಲೋಕದರ್ಶನ ವರದಿ
ಹಂಪಿ ಉತ್ಸವ: ಮುಖ್ಯ ವೇದಿಕೆಗೆ ಎಂಪಿ ಪ್ರಕಾಶರ ಹೆಸರಿಡಲು ಹಾಗೂ ಹಂಪಿಯ ಬಗ್ಗೆ ಹಾಡು ಬಿಡುಗಡೆಗೆ ಒತ್ತಾಯ
ಹೊಸಪೇಟೆ 05: ಹಂಪಿ ಉತ್ಸವದ ರುವಾರಿ, ಕನ್ನಡಕ್ಕೊಂದು ಕನ್ನಡ ವಿಶ್ವವಿದ್ಯಾಲಯ ಕೊಟ್ಟ ಎಂ.ಪಿ ಪ್ರಕಾಶರನ್ನು ಸ್ಮರಿಸಿಕೊಳ್ಳುವುದು ಕನ್ನಡಿಗರ ಅದರಲ್ಲೂ ವಿಶೇಷವಾಗಿ ಬಳ್ಳಾರಿ-ವಿಜಯನಗರ ಜಿಲ್ಲೆಯ ನಾಗರೀಕರ ಜವಾಬ್ದಾರಿ ಹಾಗೂ ಆಧ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹಂಪಿ ಉತ್ಸವ-2026ರ ಮುಖ್ಯ ವೇದಿಕೆಗೆ ಎಂಪಿ ಪ್ರಕಾಶರ ಹೆಸರನ್ನಿಡಬೇಕು ಮತ್ತು ಹಂಪಿಯ ಬಗ್ಗೆ ಹಾಗೂ ಎಂ.ಪಿ.ಪ್ರಕಾಶರ ಬಗ್ಗೆ ಕವಿ ಜಂಬುನಾಥ ಹೆಚ್.ಎಂ. ರಚನೆಯ ಚಿತ್ರಮುದ್ರಿತ ಹಾಡನ್ನು ಫೆಬ್ರವರಿ 13ರಂದು ಹಂಪಿ ಉತ್ಸವ ಉದ್ಘಾಟನಾ ಸಂದರ್ಭದಲ್ಲಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ವಿಜಯನಗರ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.
ಪರಿಷತ್ತಿನ ಜಿಲ್ಲಾಧ್ಯಕ್ಷ ಮಧುರಚನ್ನ ಶಾಸ್ತ್ರಿ, ಕನ್ನಡಪರ ಹೋರಾಟಗಾರ ಕಾಶಿನಾಥಯ್ಯ ಎಸ್.ಎಂ., ಓಂಕಾರ, ರವಿಕಾಂತ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಕವಿತಾಳ, ಅಮರೇಶ್ವರ ಎಸ್.ಪಿ, ವೃಷಬೇಂದ್ರಯ್ಯ, ರೇವಣಸಿದ್ದಯ್ಯ, ವಿಜಯೇಂದ್ರ ಅಗ್ನಿಹೋತ್ರಿ, ರಾಜಶೇಖರ ಸೂಳೆಬಾವಿ, ರಾಜಶೇಖರ್ಪ, ಮಾರೆಣ್ಣ, ಲಿಂಗಪ್ಪ, ಕುರುಬರ ನಾಗರಾಜ, ಶಶಿಧರಯ್ಯ, ಶ್ರವಣ, ಹುಲುಗಪ್ಪ, ಕಿರಣ್‌ಕುಮಾರ್, ಕರಾಮತ್ ಖವಾಸ್, ಶ್ರೀನಿವಾಸ ಶೆಟ್ಟಿ, ಪ್ರಹ್ಲಾದ್‌ರಾವ್, ಕವಿ ಜಂಬುನಾಥ ಹೆಚ್.ಎಂ. ಮತ್ತಿತರರು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಶೀಲ್ದಾರರಾದ ಕಾರ್ತೀಕರವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 