ಹಡಗಲಿ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ - ಬಿಎಂ.ಶ್ವೇತ

ಹಡಗಲಿ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ - ಬಿಎಂ.ಶ್ವೇತ Hadagali: Develop the habit of reading National Library Weekly Book - B.M. Shweta

ಹಡಗಲಿ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ - ಬಿಎಂ.ಶ್ವೇತ ಲೋಕದರ್ಶನ ವರದಿ 

ಹೂವಿನ ಹಡಗಲಿ  15:  ಪುಸ್ತಕ, ದಿನ ಪತ್ರಿಕೆ ಗಳನ್ನು ಓದುವ ಹವ್ಯಾಸ ದಿಂದ ವ್ಯಕ್ತಿತ್ವ ವಿಕಸನವಾಗಲಿದೆ ಎಂದು  ತಾ.ಪಂ. ವ್ಯವಸ್ಥಾಪಕರಾದ ಬಿ ಎಂ ಶ್ವೇತಾ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಶನಿವಾರ ಶಾಖಾ ಗ್ರಂಥಾಲಯ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ತಾಲೂಕು ಗ್ರಾ.ಪಂ. ಮೇಲ್ವಿಚಾರಕರ ಸಂಘದಿಂದ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹ 2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅರಿವು ಕೇಂದ್ರ ಸ್ಥಾಪಿಸಲಾಗಿದೆ. ಮಕ್ಕಳು ಯುವಕರು ಮಹಿಳೆಯರು ಹೆಚ್ಚು ಓದಲು ಸೂಕ್ತ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.ಯುವ ಮುಖಂಡ ಪುನೀತ್ ದೊಡ್ಡಮನಿ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಶಾಸಕರ ನೇತೃತ್ವದಲ್ಲಿ ಮೊದಲ ಸುಸಜ್ಜಿತ ಮಹಡಿಯನ್ನು ಓದುಗರಿಗೆ ಒದಗಿಸಲಾಗುವುದು ಎಂದರು. ಪತ್ರಕರ್ತ ಬಿಚ್ಚುಗತ್ತಿ ಖಾಜಾ ಹುಸೇನ್ ಮಾತನಾಡಿದರು.ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ಸುರೇಶ ಅಂಗಡಿ ವಾರ ಪೂರ್ತಿ ವಿವಿಧೆಡೆ ಓದು ಜನಮೇಜಯ ಅಭಿಯಾನದಲ್ಲಿ ಪುಸ್ತಕ ವಿತರಿಸಲಾಗುವುದು ಎಂದರು. ಶಾಖಾ ಗ್ರಂಥಾಲಯಾಧಿಕಾರಿ ಬಿ ನಾರಾಯಣ್ ದಾಸ್ಪತ್ರಕರ್ತ ಎಂ ದಯಾನಂದ ಗ್ರಾಮ ಪಂಚಾಯಿತಿ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಕುರಿ ಮಂಜುನಾಥ ತಾಲೂಕು ಅಧ್ಯಕ್ಷ ಕೆ ದೊಡ್ಡ ಬಸಪ್ಪ ನಾಗರಾಜ್ ಮಲ್ಕಿ ಒಡೆಯರ್ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಾದಕೆ ಎಂ ವೀರೇಶ್, ಕೊಟ್ರೇಶ್ ಬಿ ಮುರುಳಿ, ಕೆ ಡಯಾನ, ಶಾಂತಿ ಬಾಯಿ ಗ್ರಂಥಾಲಯ ಸಿಬ್ಬಂದಿ ಅಯ್ಯನಗೌಡ ಹಣ್ಣಿಸೊಪ್ಪಿನ ಮೀನಾಕ್ಷಿ ಗ್ರಂಥಾಲಯ ಓದುಗರು ಇತರರು ಇದ್ದರು.