ಕರೋನ ವೈರಸ್ ಸೋಂಕಿನ ಹಾವಳಿಗೆ ಆಸ್ಪತ್ರೆ ಮಾಲಿಕರೇ ಗೊಟಕ್ ..!!

ಬೀಜಿಂಗ್, ಫೆ 18, ಚೀನಾದ ವುಹಾನ್ ನಗರದಲ್ಲಿ  ಕರೋನ ವೈರಸ್ ಹಾವಳಿ ವಿಶ್ವದಾದ್ಯಂತ ಬಹಳ ಸುದ್ದಿ ಮಾಡಿದೆ  ಈಗ ಅದರ ಹೆಸರು ಕೇಳಿದರೆ ಜನ ಬೆಚ್ಚಿಬೀಳುತ್ತಾರೆ, ಮಾರುದ್ದ ಓಡುತ್ತಾರೆ,  ಅಲ್ಲಿ  ನಿರಂತರ ಮರಣಗಂಟೆ, ಮರಣ  ಮೃದಂಗ  ಬಾರಿಸುತ್ತಲೇ  ಇದೆ.  ಸಾವಿನ  ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಈಗ ನಗರದ ಆಸ್ಪತ್ರೆಯೊಂದರ ನಿರ್ದೇಶಕರೇ  ಕೊರೋನಾ ಸೋಂಕಿಗೆ  ಬಲಿಯಾಗಿದ್ದಾರೆ. ದೇಶಾದ್ಯಂತ ಹರಡಿರುವ ಕೊರೋನಾ ವೈರಸ್  ಇದೇ  ಮೊದಲ ಬಾರಿಗೆ ವೈದ್ಯಕೀಯ ಕ್ಷೇತ್ರದ ಪ್ರಮುಖರು ಬಲಿಯಾಗಿದ್ದಾರೆ ಎಂದು ಚೀನಾ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.ಕಳೆದ ವರ್ಷಾಂತ್ಯದಲ್ಲಿ ವುಹಾನ್ ನಗರದಲ್ಲಿ ಪತ್ತೆಯಾಗಿದೆ ಎನ್ನಲಾದ ಕೊರೋನಾ ವೈರಸ್ ಸೋಂಕು  ಚೀನಾದಲ್ಲಿ  72,ಸಾವಿರ  ಜನರಿಗೆ ಜನರಿಗೆ ತಗಲಿದ್ದು,ಈವರೆಗೆ ಸುಮಾರು ಎರಡು ಸಾವಿರ  ಜನರನ್ನೂ ಬಲಿತೆಗೆದುಕೊಂಡಿದೆ. ವುಹಾನ್ನಲ್ಲಿರುವ ವುಚಾಂಗ್ ಆಸ್ಪತ್ರೆಯ ನಿರ್ದೇಶಕರಾದ ಲಿಯು ಝಿಮಿಂಗ್ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಝಿಮಿಂಗ್ರನ್ನು ಬದುಕಿಸಿಕೊಳ್ಳಲು ನಡೆಸಿದ   ಎಲ್ಲ ಪ್ರಯತ್ನಗಳು ವಿಫಲವಾಗಿವೆ  ಎಂದೂ  ಸರಕಾರಿ ಪ್ರಸಾರ ಸಂಸ್ಥೆ ಸಹ  ವರದಿ ಮಾಡಿದೆ.