ಎಚ್ ಕೆ ಪಾಟೀಲ್ ಸೇವಾ ತಂಡ ಶ್ರವಣ ಯಂತ್ರ ಸಾಧನ ವಿತರಣೆ
HK Patil Service Team distributes hearing aids
ಲೋಕದರ್ಶನ ವರದಿ
ಗದಗ 14: ಅವಳಿ ನಗರವಾದ ಗದಗ ಬೆಟಗೇರಿ ನಗರದಲ್ಲಿ ಬಡತನದಲ್ಲಿರುವ ಹಾಗೂ ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲವಾಗಿರುವ ಜನಸಾಮಾನ್ಯರಿಗೆ ನೈತಿಕವಾಗಿ ವಿಶಿಷ್ಟ ಸೇವೆಯನ್ನು ನೀಡುವ ಮೂಲಕ ದುರ್ಬಲರಿಗೆ ಸಹಾಯ ಸಹಕಾರ ನೀಡುತ್ತಾ ಬಂದಿರುವ ಡಾಕ್ಟರ್ ಎಚ್ ಕೆ ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ ಪ್ರಭು ಬುರಬುರೆ ಯವರ ನೇತೃತ್ವದಲ್ಲಿ ಅವಳಿ ನಗರದಲ್ಲಿ ಸೇವಾ ತಂಡದ ಕೋ ಆರ್ಡಿನೇಟರ ಹಾಗೂ ಕ್ಯಾಪ್ಟನ್ ರವರನ್ನೊಳಗೊಂಡ ಸೇವಾ ತಂಡದ ನೆರವಿನೊಂದಿಗೆ ಬಡಜನಸಾಮಾನ್ಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ನೆರವು ನೀಡುತ್ತಿರುವರು.
ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾಕ್ಟರ್ ಎಚ್ ಕೆ ಪಾಟೀಲ್ ಸಾಹೇಬರ ಅನುಮೋದನೆಯೊಂದಿಗೆ ಶ್ರವಣ ಯಂತ್ರ (ಹಿಯರಿಂಗ್ ಏಡ್) ಶಬ್ದಗಳನ್ನು ವರ್ಧಿಸಿ, ಶ್ರವಣ ದೋಷವಿರುವವರು ಸ್ಪಷ್ಟವಾಗಿ ಕೇಳಲು ಸಹಾಯ ಮಾಡುವ, ಕಿವಿ ಹಿಂದೆ ಅಥವಾ ಒಳಗೆ ಧರಿಸಬಹುದಾದ ಚಿಕ್ಕ ಎಲೆಕ್ಟ್ರಾನಿಕ್ ಸಾಧನ ಶ್ರವಣದೋಷವನ್ನು ಸಂಪೂರ್ಣವಾಗಿ ಗುಣಪಡಿಸದಿದ್ದರೂ, ಸಂವಹನವನ್ನು ಸುಲಭಗೊಳಿಸಲು ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಶ್ರವಣ ಸಂವಹನ ಯಂತ್ರವನ್ನು ನಗರದ 22 ನೇ ವಾರ್ಡಿನ ಗಂಗಿಮಡಿ ನಿವಾಸಿಗಳಾದ ನಾಜೀಮಾ ಜಾಗೀರದಾರ್ ಅವರಿಗೆ ನೀಡಲಾಯಿತು.
ಈ ಸಂಧರ್ಭದಲ್ಲಿ ಚನ್ನಬಸಪ್ಪ ಅಕ್ಕಿ, ಜೂನಸಾಬ ನಮಾಜಿ, ಚಾಂದಸಾಬ್ ಕೊಟ್ಟೂರ್, ಶರಣಪ್ಪ ಜಾಲಿಹಾಳ, ಹುಸೇನ್ ಸಾಬ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 