ಬೆಂಗಳೂರು, ನ.22: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರವನ್ನು ಶತಾಯಗತಾಯ ಮರಳಿ ಪಡೆದುಕೊಳ್ಳಲು ತಂತ್ರಗಾರಿಕೆ ಹೆಣೆದಿರುವ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಪಕ್ಷದ ಅಭ್ಯಥರ್ಿ ಡಾ.ಗಿರೀಶ್ ನಾಶಿ ಪರ ಕ್ಷೇತ್ರದ ವಿವಿಧ ವಾಡರ್್ಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಹಾಲಕ್ಷ್ಮಿ ಲೇಔಟ್ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸವನ್ನು ಮೊದಲಿನಿಂದಲೂ ದೇವೇಗೌಡರು ಮಾಡುತ್ತಲೆ ಇದ್ದಾರೆ. ತಮಗಿಂತಲೂ ಹಿರಿಯರಾಗಿರುವ ಕ್ಷೇತ್ರದ ನಾಯಕ ರಾಜಣ್ಣ ಅವರನ್ನೇ ಅಭ್ಯಥರ್ಿ ಮಾಡಲು ತೀಮರ್ಾನಿಸಲಾಗಿತ್ತು. ರಾಜಣ್ಣ ರಾಜಕೀಯವಾಗಿ ಬೆಳೆಯಲು ಸಮರ್ಥರೂ ಆಗಿದ್ದರು. ಆದರೆ ಕ್ಷೇತ್ರದಲ್ಲಿ ಒಕ್ಕಲಿಗರ ಮತದಾರರ ಸಂಖ್ಯೆಯೇ ಹೆಚ್ಚಿರುವುದರಿಂದ ಒಕ್ಕಲಿಗ ಅಭ್ಯಥರ್ಿಯನ್ನು ಚುನಾವಣೆಯನ್ನು ನಿಲ್ಲಿಸಿ ಎಂಬ ಕೂಗು ಕೇಳಿಬಂದಿತ್ತು. ಆದರೆ ಜೆಡಿಎಸ್ ಜಾತ್ಯತೀತ ಪಕ್ಷ. ಕೇವಲ ಒಕ್ಕಲಿಗರನ್ನು ಟಿಕೆಟ್ ಕೊಟ್ಟು ಗೆಲ್ಲಿಸುವುದು ಸರಿಯಲ್ಲ. ಅದಕ್ಕಾಗಿ ಪಕ್ಷದ ಎಲ್ಲಾ ನಾಯಕರ ಜತೆ ಚಚರ್ಿಸಿ ವೀರಶೈವ ಜನಾಂಗಕ್ಕೆ ಸೇರಿದ ಗಿರೀಶ್ ಅವರನ್ನು ಆಯ್ಕೆ ಮಾಡಲಾಯಿತು ಎಂದರು.
ನನ್ನಿಂದ ಬೆಳೆದ ನಾಯಕರು ಸ್ವಾರ್ಥ ರಾಜಕೀಯ ಮಾಡುತ್ತಿದ್ದಾರೆ. ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಅನರ್ಹ ಶಾಸಕ ಗೋಪಾಲಯ್ಯ ಹಿನ್ನೆಲೆ ಏನು? ಅವರು ಇಲ್ಲಿನ ಜನರನ್ನು ಯಾವ ರೀತಿ ದುರುಪಯೋಗ ಪಡೆಸಿಕೊಂಡರು. ನನ್ನಿಂದ ಯಾವ ರೀತಿ ದುರುಪಯೋಗ ಪಡೆದುಕೊಂಡರು ಎನ್ನುವುದೆಲ್ಲವೂ ಇಲ್ಲಿನ ಜನರಿಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ನಮ್ಮಿಂದ ಬದಲಾದ ಆ ವ್ಯಕ್ತಿ. ಆದರೆ ಹುಟ್ಟುಗುಣ ಹೋಗುವುದಿಲ್ಲ.ಇದಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ.ಅವರು ಯಾಯರ್ಾರಿಗೆ ಧಮ್ಕಿ ಹಾಕುತ್ತಿದ್ದಾರೆ ಯಾಯರ್ಾರಿಗೆ ಚೂರಿ ಹಾಕುತ್ತಿದ್ದಾರೆ.ಪೋಲೀಸರನ್ನು ಇಟ್ಟು ಕೊಂಡು ಯಾವ್ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎನ್ನುವುದೆಲ್ಲವೂ ಗೊತ್ತಿದೆ.ಕೆಲವರಿಗೆ ಭಯ ಇದೆ ಭಯದಿಂದ ಅವರು ಹೊರಗಡೆ ಬಂದು ಸತ್ಯ ಹೇಳುತ್ತಿಲ್ಲ.ಈ ಕ್ಷೇತ್ರದ ಕಾಪರ್ೊರೇಟರ್ ಭದ್ರೇ ಗೌಡರಿಗೆ ಯಾವ ರೀತಿ ಧಮ್ಕಿ ಹಾಕಿದರೂ ಎನ್ನುವುದು ಗೊತ್ತಿದೆ ಎಂದರು.
ರಾಜಣ್ಣ ಗುರುವಾರ ನಾಮಪತ್ರ ವಾಪಾಸ್ ಪಡೆದುಕೊಂಡಿದ್ದು, ಸ್ವಪ್ರೇರಣೆಯಿಂದ ನಮ್ಮ ಅಭ್ಯಥರ್ಿ ನಾಶಿಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಾವು ಬೆವರು ಸುರಿಸಿ ಪಕ್ಷವನ್ನು ಕಟ್ಟುತ್ತಿದ್ದೇವೆ. ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ಬೆವರು ಸುರಿಸಿ ರಾಜಕೀಯ ಮಾಡುತ್ತಿಲ್ಲ.ಅವರು ಕಷ್ಟ ಪಟ್ಟು ಅಧಿಕಾರಕ್ಕೆ ಬಂದಿಲ್ಲ. ಮೋದಿ ಹೆಸರು ಹೇಳಿ ಅಧಿಕಾರಕ್ಕೆ ಬಂದವರು ಎಂದು ವಾಗ್ದಾಳಿ ನಡೆಸಿದರು.
ನಮ್ಮ ಕುಟುಂಬದಿಂದ 8 ಸ್ಟಾರ್ ಪ್ರಚಾರದ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಹುಣಸೂರಿನ ಜನರೇ ಪ್ರಚಾರಕ್ಕೆ ನಿಖಿಲ್ ಅವರನ್ನು ಕಳುಹಿಸಿ ಎನ್ನುತ್ತಿದ್ದಾರೆ. ಜನರು ಬಯಸಿರುವುದಕ್ಕಾಗಿ ಸ್ಟಾರ್ ಕ್ಯಾಂಪೇನ್. ನಾವಾಗಿ ಸ್ಟಾರ್ ಕ್ಯಾಂಪಿಯನ್ ಆಗಿಲ್ಲ ಎಂದು ಹೆಚ್.ವಿಶ್ವನಾಥ್ಗೆ ತಿರುಗೇಟು ನೀಡಿದರು.