ಜ್ಞಾನೇಶ್ವರ ಧರ್ಮಟ್ಟಿ ಅಧ್ಯಕ್ಷರಾಗಿ ಪದಗ್ರಹಣ
Gyaneshwar Dharmatti takes oath as President
ಲೋಕದರ್ಶನ ವರದಿ
ಹಾರೂಗೇರಿ 20: ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜ್ಞಾನೇಶ್ವರ ಧರ್ಮಟ್ಟಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.
ಪದಗ್ರಹಣ ಮಾಡಿದ ಜ್ಞಾನೇಶ್ವರ ಧರ್ಮಟ್ಟಿ ಮಾತನಾಡಿ ಅವಿರೋಧವಾಗಿ ಆಯ್ಕೆ ಮಾಡಿದ ಮಾಜಿ ಶಾಸಕ ಪಿ.ರಾಜೀವ್, ಪಕ್ಷದ ಹಿರಿಯ ಮುಖಂಡರು ಮತ್ತು ಸದಸ್ಯರಿಗೆ ಧನವ್ಯಾದ ತಿಳಿಸಿದ ಅವರು ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದು, ಹಂತಹಂತವಾಗಿ ಪರಿಹಾರ ಕಲ್ಪಿಸಲಾಗುವುದು. ಪಟ್ಟಣದ ಸ್ವಚ್ಛತೆ, ಕುಡಿಯುವ ನೀರು, ರಸ್ತೆ ಸುಧಾರಣೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದೆಂದು ಹೇಳಿದರು.
ಪುರಸಭೆ ಉಪಾಧ್ಯಕ್ಷ ಬಸವರಾಜ ಅರಕೇರಿ, ಮುಖ್ಯಾಧಿಕಾರಿ ಬಸವರಾಜ ಮನಗೂಳಿ, ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ ಕುಚಬಾಳ, ಸದಸ್ಯರಾದ ಕಾಂತು ಬಾಡಗಿ, ಆನಂದಗೌಡ ಪಾಟೀಲ, ಬಾಬುರಾವ ನಡೋಣಿ, ಬಸವರಾಜ ಅರಳಿಕಟ್ಟಿ, ಸಂತೋಷ ಸಿಂಗಾಡಿ, ಶಿವಾನಂದ ದಳವಾಯಿ, ವಿನಾಯಕ ಮುಡಸಿ, ಅಶೋಕ ಅರಕೇರಿ, ಮಾಳಪ್ಪ ಹಾಡಕಾರ, ಬಸವರಾಜ ಖೋತ, ಬಸವರಾಜ ಚೌಗಲಾ, ಜೀನಸೇನ ಸದಲಗಿ, ಪರಗೌಡ ಉಮರಾಣಿ, ಬಾಳಪ್ಪ ಸನದಿ ಮೊದಲಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 