ಗುರಮಠಕಲ್ ಶಾಸಕ ಕಂದಕೂರ ಖಾಸ್ಗತೇಶ್ವರ ಮಠಕ್ಕೆ ಭೇಟಿ

ಗುರಮಠಕಲ್ ಶಾಸಕ ಕಂದಕೂರ ಖಾಸ್ಗತೇಶ್ವರ ಮಠಕ್ಕೆ ಭೇಟಿ  Gurumatkal MLA visits Kandakura Khasgateshwara Matha


ತಾಳಿಕೋಟೆ, ಸೆ.18: ಯಾದಗಿರಿ ಜಿಲ್ಲೆಯ ಗುರಮಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರು ತಾಳಿಕೋಟೆ ಪಟ್ಟಣದ ಐತಿಹಾಸಿಕ ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಶ್ರೀಮಠದ ಪೀಠಾಧಿಪತಿ ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.  

ಗುರುವಾರ ಶ್ರೀಮಠಕ್ಕೆ ಆಗಮಿಸಿದ ಶಾಸಕ ಕಂದಕೂರ ಅವರು ಲಿಂಗೈಕ್ಯ ಶ್ರೀ ಖಾಸ್ಗತೇಶ್ವರ ಹಾಗೂ ಶ್ರೀ ವಿರಕ್ತ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪೀಠಾಧಿಪತಿ ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಪೂಜ್ಯ ಸಿದ್ಧಲಿಂಗ ದೇವರನ್ನು ಸನ್ಮಾನಿಸಿ ಗೌರವ ಸಮರ​‍್ಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶರಣಗೌಡ ಕಂದಕೂರ, ಹಲವು ದಿನಗಳಿಂದ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಬೇಕೆಂಬ ಆಸೆ ಇತ್ತು. ಕೆಲಸದ ಒತ್ತಡದಿಂದ ಸಾಧ್ಯವಾಗಿರಲಿಲ್ಲ. ಇದೀಗ ಭೇಟಿ ನೀಡಿ ಆಶೀರ್ವಾದ ಪಡೆದಿರುವುದು ತಮ್ಮ ಜೀವನದ ಮಹತ್ವದ ದಿನ ಎಂದು ಹೇಳಿದರು. ಶ್ರೀಗಳ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸಿದರು.  

ಶಾಸಕ ಕಂದಕೂರ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿದ ಶ್ರೀಗಳು, ಅವರು ಕ್ರಿಯಾಶೀಲ, ಸರಳ ಹಾಗೂ ಜನಪರ ಕಾಳಜಿ ಹೊಂದಿರುವ ಯುವ ರಾಜಕಾರಣಿಯಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ ಎಂದು ಆಶಿಸಿದರು.  

ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಷಚಂದ್ರ ಕಟಕಟಿ, ವಿಜಯಪುರ ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಬಸನಗೌಡ ಮಾಡಗಿ, ಮುಖಂಡರಾದ ನಿಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಅರುಣಿ, ಮಲ್ಲನಗೌಡ ಹೊಸಳ್ಳಿ, ನರಸಿಂಹರೆಡ್ಡಿ, ಶರಣು ಯಡಹಳ್ಳಿ, ಅಶೋಕರಡ್ಡಿ ಹೊನಗೇರಾ, ಶಾಸಕರ ಆಪ್ತ ಸಹಾಯಕ ಗುರುರಾಜ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.