ವಿಶ್ವಕರ್ಮ ಸಮಾಜದವರು ಶ್ರಮಜೀವಿಗಳು: ಶಿರಶ್ಯಾಡ ಶ್ರೀಗಳು
The Vishwakarma community consists of hardworking people: Shirashyada Sri
ಇಂಡಿ 18 : ವಿಶ್ವಕರ್ಮ ಸಮುದಾಯ ಶ್ರಮ ಜೀವಿಗಳು, ಜಗತ್ತಿನ ಸೃಷ್ಟಿಗೆ ವಿಶ್ವಕರ್ಮ ಪ್ರಮುಖ ಕಾರಣಿ ಪುರುಷರು ಎಂದು ಶಿರಶ್ಯಾಡ ಶ್ರೀಮಠದ ಅಭಿನವ ಮುರುಘೆಂದ್ರ ಮಹಾಸ್ವಾಮೀಜಿ ಹೇಳಿದರು.ಅವರು ಗುರುವಾರ ಭಗವಾನ್ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ವಿಶ್ವದ ಅನೇಕ ವಾಸ್ತುಶಿಲ್ಪಗಳ ಸೃಷ್ಠಿಗೆ ಮೂಲ ವಿಶ್ವಕರ್ಮ ಸಮುದಾಯ. ಮನುಷ್ಯ ಹುಟ್ಟಿನಿಂದ ಸಾಯುವ ಕೊನೆಯವರೆಗೂ ವಿಶ್ವಕರ್ಮ ಜನರು ಬೇಕು. ಇಂದು ತಂತ್ರಾಂಜ್ಞಾನ ಬೆಳವಣಿಗೆಯಲ್ಲಿ ಮೂಲ ಉದ್ಯೋಗ ನಶಿಸುತ್ತಿವೆ. ವಿಶ್ವಕರ್ಮ ಸಮಾಜ ಕುಲ ಬಾಂಧವರು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಶಿಕ್ಷಣ ಮಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದರು.
ಪ್ರತಿಯೊಂದಕ್ಕೂ ರಾಜಕಾರಣಿಗಳಿಗೆ ಅವಲಂಬನೆ ಬೇಡ. ನಾವೂ ಕೂಡಾ ಕಿಂಚ್ಚಿತ್ತು ಉದಾರ ಗುಣ ಬೆಳೆಸಿಕೊಳ್ಳಬೇಕು. ವಿಶ್ವಕರ್ಮ ದೇವಾಸ್ಥಾನದ ನಿರ್ಮಾಣಕ್ಕೆ ನಾನು ನಿಮ್ಮ ಜೊತೆ ಜೋಳಿಗೆ ಹಿಡಿದು ಹಣ ಸಂಗ್ರಹಿಸುತ್ತೇನೆ ಮುಂಬರುವ ಜಯಂತಿ ಬರುವಷ್ಟರಲ್ಲಿ ಗುಡಿ ಕಟ್ಟೋಣ ಎಂದು ಆಶೀರ್ವಚನ ನೀಡಿದರು.ಇಂಡಿಯ ಸಿದ್ಧಾರೂಢ ಮಠದ ಡಾ.ಸ್ವರೂಪಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ ನೀವು ಜಾಗ್ರತೆಯಿಂದ ಇರಬೇಕು. ಸಮಾಜ ಇಬ್ಭಾಗ ಇದ್ದಾಗ ಯಾರೂ ಬೆಲೆ ಕೊಡುವುದಿಲ್ಲ. ಶಿಕ್ಷಣದ ಜೊತೆಗೆ ಸಂಸ್ಕಾರ ಸಂಸ್ಕೃತಿ ಮುಖ್ಯ. ಹಿಂದೆಯೇ ಜಾತಿ ಆಧಾರಿತ ಉದ್ಯೋಗ ಇದ್ದವು ಇಂದು ಎಲ್ಲರೂ ಎಲ್ಲಾ ಉದ್ಯೋಗದಲ್ಲಿದ್ದಾರೆ. ಶಿಕ್ಷಣ ಕಲಿತು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ನುಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 