ಗುರು-ಶಿಷ್ಯರ ಸಂಬಂಧ ಬಹಳ ಮುಖ್ಯ: ಅರಕೇರಿ
Guru-disciple relationship is very important: Arakeri
ಲೋಕದರ್ಶನ ವರದಿ
ಜಮಖಂಡಿ 29: ಗುರು ಶಿಷ್ಯರ ಸಂಬಂಧ ಬಹಳ ಮುಖ್ಯವಾಗಿದೆ. ಗುರುವಿನ ಸ್ಥಾನ ಸಿಗುವುದು ದೇವರ ಕೃಪೆ ಇದ್ದರೆ ಮಾತ್ರ ಇಂತಹ ಸ್ಥಾನ ದೊರೆಯುತ್ತಿದೆ. ಎಲ್ಲ ಸಂಬಂಧದಲ್ಲಿ ಎರಡು ಸಂಬಂಧ ಮುಖ್ಯವಾಗಿದೆ. ಗುರು-ಶಿಷ್ಯರ ಸಂಬಂಧ ಬಹಳ ಮುಖ್ಯವಾದೆ ಎಂದು ಗಣಿತ ಶಿಕ್ಷಕ ಬಿ.ಬಿ.ಅರಕೇರಿ ಹೇಳಿದರು.
ತಾಲ್ಲೂಕಿನ ಕುಂಚನೂರ ಗ್ರಾಮದ ಸರಕಾರಿ ಪ್ರೌಢ ಶಾಲೆ ಪುರ್ನವಸತಿ ಕೇಂದ್ರದ 2026-07 ನೇ ಸಾಲಿನ ಎಸ್.ಎಸ್.ಎಲ್.ಸಿ ಸ್ನೇಹ ಬಳಗದಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕಮಕ್ಕಳು ಇದ್ದ ಸಮಯದಲ್ಲಿ ನಿಮ್ಮದ್ದು ತುಂಟತನ ಇರುತ್ತದೆ.ಆದರೆ ಇಂದು ನಿಮ್ಮನ್ನು ನೋಡಿದ ತಕ್ಷಣ 18 ವರ್ಷ ಕಾಲ ಕಳೆದ ಬಳಿಕ ಇವಾಗ ನೀವುಗಳು ಜವಾಬ್ದಾರಿ ಸ್ಥಾನದಲ್ಲಿ ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಶಾಲಾ ಅವಧಿಯಲ್ಲಿ ತಾವುಗಳು ಚಿಕ್ಕವರು ಇರುವಾಗ ಶಾಲೆಯಲ್ಲಿ ಸಾಧನೆ ಮಾಡಿದರೆ ಮೊದಲು ಖುಷಿ ಪಡುವವರು ಯಾರಾದರೂ ಇದ್ದರೆ. ಅದು ಹೆತ್ತ ತಂದೆ, ತಾಯಿ ಮತ್ತು ಶಿಕ್ಷಣ ಕಲಿಸಿದ ಗುರುಗಳು ಬಹಳ ಸಂತೋಷ ಪಟ್ಟುತ್ತಾರೆ. ತಮ್ಮ ಜೀವನದಲ್ಲಿ ಮಾನವಿಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಕಳಕಳಿಯನ್ನು ಹೊಂದಬೇಕು ಎಂದರು.
ನಿವೃತ್ತ ಶಿಕ್ಷಕ ಸಿ.ಎಮ್.ಹಂಚಿನಾಳ ಮಾತನಾಡಿ, ನಮ್ಮ ಶಾಲಾ ಶಿಕ್ಷಕರು ಒಕ್ಕಟಿನಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಆಟಪಾಠದಲ್ಲಿ ಕಲಿಸಿ. ಆಟದ ಸ್ಪರ್ಧೆಯಲ್ಲಿ ಭಾಗವಹಿಸುವ ಹಾಗೆ ಮಾಡಿ. ಮತ್ತು ಒಳ್ಳೆಯ ವಿದ್ಯಾರ್ಥಿಗಳನ್ನು ನಿರ್ಮಿಸಿದ್ದು ಸಂತಸ ತಂದಿದೆ ಎಂದರು.
ನಿವೃತ್ತ ಶಿಕ್ಷಕ ಎ.ಜಿ.ಬಾರಸಕಡೆ ಮಾತನಾಡಿ, ಮುಖ್ಯೋಪಾಧ್ಯಾಯರ ಕೆಲಸವಾಗಿದು. ಜಿಲ್ಲೆಯ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಶಿಕ್ಷಣ ಇಲಾಖೆಯ ಕೆಲಸಗಳನ್ನು ನಿರ್ವಹಿಸುವದು ಬಹಳ ಮುಖ್ಯವಾಗಿತ್ತು. ಮುಖ್ಯೋಪಾಧ್ಯಾಯರ ಕೆಲಸದಲ್ಲಿ ಇದ್ದರು ಸಹ ಇಲ್ಲಿನ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿತ್ತು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದ ಕಾರಣ ಶಾಲೆಯ ಕೀರ್ತಿ ಬರುತ್ತದೆ. ಇವಾಗ ಎಲ್ಲರೂ ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ನಿವೃತ್ತ ದೈಹಿಕ ಶಿಕ್ಷಕ ಎಸ್.ವಾಯ್. ಬಿರಾದರ ಮಾತನಾಡಿ, ಆಟದಲ್ಲಿ ಮೊದಲ ಸ್ಥಾನ ಪಡೆದು. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ನಮ್ಮ ಶಾಲಾ ಮಕ್ಕಳು ಎಂದರು.
ಉಪನ್ಯಾಸಕ ಕೆ.ಬಿ.ಬೆಳಗಲಿ ಮಾತನಾಡಿ, ಖಾಸಗಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ಶಾಲೆಯ ಮಕ್ಕಳಿಗೆ ಪೈಪೋಟಿ ಇತ್ತು. ಆದರೆ ಖಾಸಗಿ ಶಾಲೆಯ ಮಕ್ಕಳಕಿಂತ ಒಳ್ಳೆಯ ಗುಣಮಟ್ಟದ ಶಿಕ್ಷಣ ಹಾಗೂ ಆಟಪಾಠದಲ್ಲಿ ಮುಂದೆ ಬರುವ ಹಾಗೆ ಶಿಕ್ಷಣವನ್ನು ಕಲಿಸಿದಾಗ ಮಕ್ಕಳು ಸಾಧನೆಯನ್ನು ಮಾಡುತ್ತಿದ್ದರು ಎಂದರು.
ಅಧ್ಯಕ್ಷತೆ ವಿ.ಬಿ.ವಂದಾಲ, ಮುಖ್ಯ ಅತಿಥಿಗಳಾ.ಡಾ.ಎಸ್.ಬಿ.ಮಟೋಳಿ, ನಿವೃತ್ತ ಉಪನ್ಯಾಸಕ ಎಮ್.ಬಿ.ಮೇಳಿ, ಎ.ಕೆ.ಮಾಗಿ ಶಿಕ್ಷಕ ಕುಂಚನೂರ, ಎಸ್.ಸಿ.ಬಿದರಿ ಮುಖ್ಯೋಪಾಧ್ಯಾಯ ಝಂಜರವಾಡ. ಬೆಂಗಳೂರು ವಾಣಿಜ್ಯ ತೆರಿಗೆ ಉಪ ಆಯುಕ್ತೆ ಸವಿತಾ ಇನಾಮದಾರ, ಎಸ್.ಡಿ.ಎ.ಶಾಲೆ ಮೈಗೂರ ಬಿ.ಎಸ್. ಜೋರಾಪೂರ ವೇದಿಕೆಯಲ್ಲಿ ಉಪಸ್ಥಿತರಿದರು. ಗೀತಾ ಮೆಟ್ಟಗುಡ್ಡ ಮತ್ತು ಶೃತಿ ಶಿರೋಳ ಸ್ವಾಗತಿಸಿದರು, ಅಮಸಿದ್ದ ಸುಣಗಾರ ನಿರೂಪಿಸಿದರು, ರೂಪಾ ಯಾದವಾಡ ಪ್ರಾರ್ಥನಿಸಿದರು, ಹಳೇಯ ವಿದ್ಯಾರ್ಥಿನಿಯರು ಸ್ವಾಗತ ಗೀತೆಯನ್ನು ಹಾಡಿದರು. ಹಳೇಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 