ಫೆ. 23ರಂದು ಗುರು ವಂದನಾ ಕಾರ್ಯಕ್ರಮ

Guru Vandana program on Feb. 23rd

ಸಂಬರಗಿ 22: ಗುಂಡೆವಾಡಿ ಗ್ರಾಮದ ಕಾಡಸಿದ್ದೇಶ್ವರ ಪ್ರೌಢ ಶಾಲೆ 1987 ದಿಂದ 2010ರ ವರೆಗೆ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ಫೆಬ್ರುವರಿ 23ರಂದು ಗುರು ವಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಈ ಶಾಲೆಯ ಮಾಜಿ ವಿದ್ಯಾರ್ಥಿ ಡಾ. ಆನಂದ ಗುಂಡಿಗಾಂವಿ ತಿಳಿಸಿದ್ದಾರೆ. 

ಗುರುವಂದನಾ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿ ಒಟ್ಟು 2300 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಈ ಕಾರ್ಯಕ್ರಮದ ವಿದ್ಯ ಸಾನಿಧ್ಯ ಕವಲುಗುಡ್ಡ ಮಠದ ಶ್ರೀ ಅಮರೇಶ್ವರ ಮಹಾರಾಜ ಹಾಗೂ ಪವಾಡೇಶ್ವರ ಮಹಾಸ್ವಾಮೀಜಿ ದಿವ್ಯ ಸಾನಿದ್ಯ ವಹಿಸುತ್ತಿದ್ದಾರೆ. ಈ ಶಾಲೆಯ ಎಲ್ಲ ವಿದ್ಯಾರ್ಥಿಗಳು ಭಾಗಿಯಾಗಬೇಕೆಂದು ಅವರು ತಿಳಿಸಿದ್ದಾರೆ.