ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ

ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ Guru Vandana program by students

ವಿಜಯಪುರ 20: ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಹಾಗೂ ಶ್ರೀ ಕೇಶಿರಾಜ ಪ್ರೌಢಶಾಲೆಯ 1986 ರಿಂದ 1997 ನೇ ಸಾಲಿನ ವಿದ್ಯಾರ್ಥಿಗಳ ಬಳಗದಿಂದ ಗುರು ವಂದನಾ ಕಾರ್ಯಕ್ರಮ ಜರುಗಿತು. 

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವೇದಮೂರ್ತಿ ಬಸವಲಿಂಗಯ್ಯ ಗದ್ಗಿಮಠ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕ್ಷೇತ್ರ ಶಿಕ್ಷ್ಷಣಾಧಿಕಾರಿ ಎಸ್‌.ಎಮ್‌. ನಾಗಾವಿ ವಹಿಸಿದ್ದರು. 

ಇದೇ ಸಂದರ್ಭದಲ್ಲಿ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಎಸ್‌.ಎನ್‌.ಬಸವರೆಡ್ಡಿ, ಶಿಕ್ಷಕರಾದ ಎಸ್‌.ಎಂ.ಪೊಲೀಸ ಪಾಟೀಲ, ಎಎಂ.ಬಿ.ಹೆರಕಲ್, ಬಿ.ಬಿ.ಬಾಗೇವಾಡಿ, ಎಂ.ಎಸ್‌. ಅವರಾದಿ, ಎಚ್‌.ಕೆ.ಉಸ್ತಾದ, ಎಂ.ಎಂ.ದಂಡೋತಿ, ಎಸ್‌.ಎನ್‌.ಸೊನ್ನದ, ಡಿ.ಟಿ.ದಾಸರ, ಎಸ್‌.ಎಸ್‌.ಸಾತಿಹಾಳ, ಬಿ.ಆರ್‌. ಮಳ್ಳಿ, ಎ.ಎಸ್‌.ಬಸವಣ್ಣನವರ, ಎ.ಎಸ್‌. ಭೀಮನಗರ, ಮುಖ್ಯಗುರುಮಾತೆ ಬಿ.ಬಿ. ಅಗ್ನಿ, ಎಸ್‌.ಎ.ಬಿರಾದಾರ, ಸಂಪತ್ತ ರಡ್ಡಿ, ಬಿ. ಕೆಂಭಾವಿ, ಬಸವರಾಜ ಖೈನೂರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್‌.ಎಸ್‌.ಸಾತಿಹಾಳ ಮಾತನಾಡಿದ ಅವರು, ಹಿಂದೆ ಕಲಿತ ವಿದ್ಯಾರ್ಥಿಗಳು ಆಟಪಾಠಗಳ ಬಗ್ಗೆ ಗುಣಗಾನ ಮಾಡಿದರು. ಪ್ರಾಥಮಿಕ ಶಾಲೆಯಲ್ಲಿ 50 ಸಸಿಗಳನ್ನು ನೆಟ್ಟು ಪರಿಸರ ಪ್ರೇಮ ಮೆರಿದರು. 

ವಿದ್ಯಾರ್ಥಿನಿ ಮಲ್ಲಮ್ಮ ಗುನ್ನಾಪುರ್ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದಳು. ಸಿದ್ದು ರೆಡ್ಡಿ ದೇಸಾಯಿ ಕಾರ್ಯಕ್ರಮವನ್ನು ಸ್ವಾಗತಿಸಿದರು. ಕವಿತಾ ಅ ಕುಲಕರ್ಣಿ ನಿರೂಪಿಸಿದರು. ಶಿವಲಿಂಗ ದಂಡೋತಿ ವಂದಿಸಿದರು. 

ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಸಂಪತರೆಡ್ಡಿ, ಕೆಂಭಾವಿ, ಮೆಹಬೂಬ ಖಾಜಿ, ಶ್ರೀಶೈಲ ಡಂಬಳ, ಪ್ರಕಾಶ ಕೊಂಡಗೂಳಿ, ಭೀಮರಾಯ ನಂದೆಳ್ಳಿ, ಚಂದ್ರಕಾಂತ ವಾಲಿ, ಪರಮಾನಂದ ಸಿಂದಗಿ, ನಾಗು ದೇಸಾಯಿ, ಬಸವರಾಜ ಕೈನೂರ, ಶಿವು ಸಾತಿಹಾಳ, ಅಕ್ಕಮಹಾದೇವಿ ಹಿಪ್ಪರಗಿ, ನೀಲಮ್ಮ ಬಿರಾದಾರ, ಚನ್ನಪ್ಪ ಪೂಜಾರಿ ಸೇರಿದಂತೆ 1986 ರಿಂದ 1997 ನೇ ಎಲ್ಲ ಹಳೆಯ ವಿದ್ಯಾರ್ಥಿಗಳು ಇದ್ದರು.