2009-10ನೇ ಸಾಲಿನ ವಿದ್ಯಾರ್ಥಿಗಳಿಂದ ಗುರು ವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ

2009-10ನೇ ಸಾಲಿನ ವಿದ್ಯಾರ್ಥಿಗಳಿಂದ ಗುರು ವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ Guru Vandana and Friends Reunion Program by the students of 2009-10

ಸಿಂದಗಿ 23 : ಒಬ್ಬ ವ್ಯಕ್ತಿಯ ಬದುಕಿನಲ್ಲಿಗುರು ಮತ್ತು ಸ್ನೇಹಿತ ಸೇತುವೆಯಾಗಿ ನಿಂತರೆ ಆ ವ್ಯಕ್ತಿ ಸಮಾಜದಲ್ಲಿ ಸುಸಜ್ಜಿತ ಮತ್ತು ಸನ್ನಡತೆಯ ಸಾರ್ಥಕ ಜೀವನ ನಡೆಸಬಲ್ಲ ಎಂದು ಸರ್ಕಾರಿ ಪದವಿ ಪೂರ್ವಕಾಲೇಜಿನ ಉಪನ್ಯಾಸಕ ಜಿ.ಎಸ್ ಮೊರಟಗಿ ಹೇಳಿದರು. 

ಪಟ್ಟಣದ ಹೊರ ವಲಯದ ಸರ್ಕಾರಿ ಪದವಿ ಪೂರ್ವಕಾಲೇಜು ಆವರಣದಲ್ಲಿ 2009-10ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಗುರು ವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರುವಿನ ಗುಣಾತ್ಮಕ ಬೋಧನೆ ಹಾಗೂ ಸ್ನೇಹಿತರ ಸನ್ಮಾರ್ಗವಿದ್ದರೆ ಸಮಾಜದಲ್ಲಿ ಏನಾದರೂ ಸಾಧಿಸಬಹುದು ಅಲ್ಲದೆ ಸಂಸ್ಕೃತಿಯಿಂದ ಜೀವಿಸಬಹುದು ಎಂದರು. ಪ್ರಾಧ್ಯಾಪಕ ಡಾ.ಶಿವಾನಂದ ಜಮಾದಾರ ಉಪನ್ಯಾಸಕರಾದ ಎಸ್‌ಎಸ್ ಸುರಪುರ, ಗುರುದೇವಪ್ಪ ಬಿರಾದಾರ, ಶಿವಶರಣ ಬೂದಿಹಾಳ ಮಾತನಾಡಿ ವಿದ್ಯಾರ್ಥಿಗಳು ಎಷ್ಟೇದೊಡ್ಡ ಪದವಿ, ಅಧಿಕಾರದಲ್ಲಿದ್ದರೂಕೂಡ ನಮಗೆ ಮಕ್ಕಳಂತೆಯೇ ಇವರಉನ್ನತಿಯ ಮೇಲೆ ನಮ್ಮ ಬೋಧನಾ ಸಾಮರ್ಥ್ಯ ನಿರ್ಧರಿಸುತ್ತದೆ. ವಿದ್ಯಾರ್ಥಿಗಳ ಸಾಧನೆಯೇ ನಮಗೆ ಒಂದುದೊಡ್ಡ ಸನ್ಮಾನವಿದ್ದಂತೆ, ಈ ಅರ್ಥಪೂರ್ಣಗುರುವಂದನಾಕಾರ್ಯಕ್ರಮ ಮಾಡುವ ಮೂಲಕ ಗುರು ಶಿಷ್ಯರ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಹರ್ಷವ್ಯಕ್ತಪಡಿಸಿದರು. 

 ಹಳೆಯ ವಿದ್ಯಾರ್ಥಿಗಳಾದ ಆರಕ್ಷಕ ಮೌಲಾಲಿ ಆಲಗೂರ, ವಕೀಲ ರವಿಂದ್ರ ಕೊಂಬಿನ, ಆರಕ್ಷಕ ಸುರೇಶ ನಾಯ್ಕೋಡಿ, ಮುತ್ತು ಸುಲ್ಪಿ, ಪಂಚಾಯತ ಇಲಾಖೆಯ ಗ್ರೇಡ್‌-1 ಕಾರ್ಯದರ್ಶಿ ನೀಲಮ್ಮ ಬಿರಾದಾರ, ಸಮೂದಾಯ ಆರೋಗ್ಯ ಅಧಿಕಾರಿ ಶೋಭಾ ನಿಂಬಾಳ, ರಾಜೇಶ್ವರಿ ದೊಡಮನಿ ಮಾತನಾಡಿ ಗುರುಗಳು ಜ್ಞಾನದ ದೀಪ್ತಿಯಿಂದಂತೆ ಅವರ ಅಕ್ಷರಜ್ಯೋತಿ ಬೆಳಗಿದಷ್ಟು ನಮ್ಮಜೀವನದ ಪ್ರಕಾಶಿಸುತ್ತದೆ, ಒಂದುಕಲ್ಲು ಶಿಲೆಯಾಗಲು ಶಿಲ್ಪ ಎಷ್ಟು ಮುಖ್ಯವೋ ಹಾಗೆಯೇ ವಿದ್ಯಾರ್ಥಿಗಳ ಬಾಳು ಸುಂದರಗೊಳ್ಳಲು ಗುರು ಅಷ್ಟೇ ಮುಖ್ಯಎಂದರು. ಭೈರವಾಡಗಿ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರಭುಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ನೂರಕ್ಕೂ ಅಧಿಕ ವಿಧ್ಯಾರ್ಥಿ/ನೀಯರಿಂದರೇಷ್ಮೆ ಶಾಲು, ಏಲಕ್ಕಿ ಹಾರ, ಮೈಸೂರು ಪೇಟ, ಗಾಜಿನಿಂದ ಮಾಡಿದ ಸನ್ಮಾನದ ಫಲಕದೊಂದಿಗೆ ಪುಷ್ಪಾರ್ಜನೆಯಿಂದಎಲ್ಲ ಗುರುಗಳಿಗೆ ಗುರುವಂದನಾ ಸನ್ಮಾನ ಮಾಡಿ ಗೌರವಿಸಿದರು. 

ವೇದಿಕೆಯ ಮೇಲೆ ನಿವೃತ್ತ ಪ್ರಾಂಶುಪಾಲರಾದ ಪಂಚಾಕ್ಷರಿ ಹಿರೇಮಠ, ನಿವೃತ್ತಉಪನ್ಯಾಸಕಎ.ಜಿ ಮುದ್ದೇಬಿಹಾಳ, ಸಂಚಾರಿ ನೀರೀಕ್ಷಕರಾದ ಬಸವರಾಜ ಆಹೇರಿ, ಉಪನ್ಯಾಸಕ ಮೌಲಾಲಿ ಯಾಳಗಿ, ಆರ್‌ಎಸ್ ಗಾಯಕವಾಡ ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿ-ವಿದ್ಯಾರ್ಥಿನೀಯರಿಗಾಗಿ ವಿವಿಧಕ್ರೀಡೆ ಹಾಗೂ ಮನರಂಜನೆ ಏರಿ​‍್ಡಸಿ ಪ್ರಥಮ, ದ್ವಿತೀಯ, ತೃತೀಯ ಪ್ರಶಂಸನೀಯ ಪತ್ರ ನೀಡಲಾಯಿತು.ಎಲ್ಲರೂ ನೃತ್ಯಕ್ಕೆ ಹೆಜ್ಜೆ ಹಾಕಿದರು.