ಗುರುವಂದನ ಹಾಗೂ ಬಿಳ್ಕೋಡುವ ಸಮಾರಂಭ

ಗುರುವಂದನ ಹಾಗೂ ಬಿಳ್ಕೋಡುವ ಸಮಾರಂಭ Guru Vandana and Farewell Ceremony

ದೇವರಹಿಪ್ಪರಗಿ 18: ತಾಲೂಕಿನ ಕೋರವಾರ ಗ್ರಾಮದ  ಎನ್,ಎಸ್, ಢವಳಗಿ, ಸಂಯುಕ್ತ ಪದವಿ ಪೂರ್ವ ಕಾಲೇಜು ಕೋರವಾರ ಎಲ್ಲಾ ವಿದ್ಯಾರ್ಥಿ ಬಳಗದಿಂದ ಎಸ್‌. ವ್ಹಿ.ಜೋಶಿ ಗುರುಗಳ ಸೇವಾ ನಿವೃತ್ತಿ ಬಿಳ್ಕೊಡುಗೆ ಹಾಗೂ ಗುರುವಂದನಾ ಕಾರ್ಯಕ್ರಮ  ಭಾನುವಾರ  ಎನ್‌.ಎಸ್‌.ಡಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜರುಗಿತು. 

 ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಲಮೇಲ ವಿರಕ್ತಮಠದ ಪರಮಪೂಜ್ಯ ಶ್ರೀ ಜಗದೇವ ಮಲ್ಲಿ ಬೊಮ್ಮಯ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು, ಮುಖ್ಯ ಉಪನ್ಯಾಸಕರಾಗಿ ಸಿಂದಗಿ ಸಿ.ಎಂ.ಮನಗೂಳಿ ಕಾಲೇಜಿನ ನಿವೃತ್ತ ಉಪನ್ಯಾಸಕರಾದ  ಬಿ ಎಂ ಪಾಟೀಲ ಭಾಗವಹಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯರಾದ ಎಸ್‌.ಟಿ. ಬಳ್ಳಾರಿ ವಹಿಸಿದ್ದರು, ವಿಶೇಷ ಸನ್ಮಾನಿತರುಗಳಾದ ಆರ್‌.ಎಸ್‌. ಪಾಟೀಲ ನಿವೃತ್ತ ಶಿಕ್ಷಕರು, ಎಂ.ಎಂ.ಬಿರಾದಾರ ನಿವೃತ್ತ ಶಿಕ್ಷಕರು, ಎಸ್‌.ವ್ಹಿ. ಜೋಶಿ ನಿವೃತ್ತ ಮುಖ್ಯಗುರುಗಳು,ಎಮ್‌.ಆರ್‌. ಚಿಂಚೋಳಿ ನಿವೃತ್ತ ಶಿಕ್ಷಕರು, ಎಸ್‌.ಬಿ.ಸಾಸನೂರ,ಬಿ.ಜಿ. ಬಿರಾದಾರ, ನಿವೃತ್ತ ಪ್ರಾಚಾರ್ಯರು ಎಂ.ಆರ್‌. ಶಿರಸಂಗಿ ನಿವೃತ್ತ ಉಪನ್ಯಾಸಕರು, ಐ.ಎಸ್‌. ವೀರಘಂಟಿ ಮಠ ನಿವೃತ್ತ ಉಪನ್ಯಾಸಕರು, ಎಸ್‌.ಎಸ್‌. ಮೋರಟಗಿ ಪ್ರಾಚಾರ್ಯರು, ಎಸ್‌.ಬಿ.ಮಠ ಉಪನ್ಯಾಸಕರು, ಬಿ.ಜಿ. ಸಿದ್ದರಡ್ಡಿ , ಶಶಿಕಲಾ ಡಮನಾಳ, ಕಮಲಬಾಯಿ ಪಾಟೀಲ, ದೇವಮ್ಮ ಗುಳಬಾಳ, ಕಮಲಾಬಾಯಿ ಡವಳಗಿ, ಎಸ್‌. ಬಿ.ಪೂಜಾರಿ, ಎಸ್‌.ಬಿ. ಹೊನಮಟ್ಟಿ, ಹಾಗೂ ಸಾವಿರಾರು ವಿದ್ಯಾರ್ಥಿಗಳು ಊರಿನ ಗಣ್ಯರು, ಪಾಲಕರು ಭಾಗಿಯಾಗಿದ್ದರು.